Monday, November 23, 2026
HomeBelagaviಹಿಂದೂ ತಾಯಂದಿರು ಮಕ್ಕಳಿಗೆ ಶಸ್ತ್ರಾಸ್ತ್ರ ವಿದ್ಯೆ ಕಲಿಸಿ: ಗೋಪಾಲ್ ಕರೆ

ಹಿಂದೂ ತಾಯಂದಿರು ಮಕ್ಕಳಿಗೆ ಶಸ್ತ್ರಾಸ್ತ್ರ ವಿದ್ಯೆ ಕಲಿಸಿ: ಗೋಪಾಲ್ ಕರೆ

ಬೆಳಗಾವಿ
ಹಿಂದೂ ಸಮಾಜದಲ್ಲಿ ಅಪಮಾನ ಮಾಡುವವರಿಗೆ ತಕ್ಕ ಪಾಠ ಕಲಿಸಲು ಮನೆಯಲ್ಲಿ ತಾಯಂದಿರು ಮಕ್ಕಳಿಗೆ ಶಸ್ತ್ರಾಸ್ತ್ರದ ವಿದ್ಯೆ ಕಲಿಸಬೇಕು ಎಂದು ಶ್ರೀರಾಮ ಮಂದಿರ ನಿರ್ಮಾಣದ ಮುಖ್ಯಸ್ಥ ಗೋಪಾಲ್ ಭಟ್ ಕರೆ ನೀಡಿದರು.
ಭಾನುವಾರ ಬೆಳಗಾವಿ ತಾಲೂಕಿನ ಸುಳೆಬಾವಿ ಗ್ರಾಮದಲ್ಲಿ ಯದ್ದಲಭಾವಿ ಹಟ್ಟಿ ರೋಡ್ ನ ಹುಲಿಯಮ್ಮನ ತೋಟದಲ್ಲಿ ಬಟೆಂಗೆ ತೋ ಕಂಟೆಗೆ ಎಕ್ ಹೈ ತೋ ಸೆಫ್ ಹೈ ಹಿಂದೂ ಪರ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ದೇಶದಲ್ಲಿ ಲವ್ ಜಿಹಾದ್ ಆಗಬಾರದು, ಹಿಂದೂಗಳ ಮೇಲೆ ದಬ್ಬಾಳಿಕೆಯಾಗಬಾರದು. ಇಲ್ಲದಿದ್ದರೇ ಹಿಂದೂಗಳು ಪರಾಕ್ರಮ ಮೆರೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹಿಂದೂತ್ವ ಇದ್ದರೇ ಭಾರತ ಇರುತ್ತದೆ. ಭಾರತದ ಮೇಲೆ ಪರಾಕ್ರಮ ದಾಳಿಯಾದಾಗ ಅಯೋಧ್ಯೆಯಯಲ್ಲಿ ರಾಮ ಮಂದಿರ ಧ್ವಂಸವಾಯಿತು. ಹಿಂದುಗಳು ಪರಾಕ್ರಮ ಮೆರೆದಾಗ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಯಿತು ಎಂದರು.
ಬಾಬರ್ ಅಯೋಧ್ಯೆ ಧ್ವಂಸ ಮಾಡಿ ರಾಮನ ನಷ್ಟ ಮಾಡಿದ್ದ. ಬಾಬರ್ ಸತ್ತು‌ ಹೋದ ಆದರೆ ರಾಮನ ಆದರ್ಶ, ರಾಮನ ಮಂದಿರ ಭವ್ಯವಾಗಿ ನಿರ್ಮಾಣ ಮಾಡಲಾಗಿದೆ ಎಂದರು.
ಹಿಂದೂತ್ವದ ಪ್ರತೀಕವಾಗಿ ಅಯೋಧ್ಯೆಯಲ್ಲಿ ರಾಮನ ಮಂದಿರ ನಿರ್ಮಾಣವಾಗಿದೆ. ಈಗ ನಾವು ರಾಮರಾಜ್ಯ ನಿರ್ಮಾಣ ಮಾಡಬೇಕು. ಭಾರತಕ್ಕೆ ಸಮೃದ್ಧಿಬೇಕು. ಭಾರತದ ಜಿಡಿಪಿ ಹೆಚ್ಚಿಸಬೇಕು. ಆ ನಿಟ್ಟಿನಲ್ಲಿ ನಾವು ಹೊರಟ್ಟಿದ್ದೇವೆ. ಸಮಾಜದಲ್ಲಿ ಜಾತಿ, ಭಾಷೆ, ಪ್ರಾಂತ, ಪಂಗಡ ಇಲ್ಲದ ಸಮರಸವಾಗಬೇಕು. ನಾವೆಲ್ಲ ಒಂದು. ನಾವೆಲ್ಲರೂ ಹಿಂದೂವಾಗಬೇಕು. ನಮ್ಮೆಲ್ಲರ ಆರಾಧ್ಯ ಛತ್ರಪತಿ ‌ಶಿವಾಜಿ ಮಹಾರಾಜರು, ಕಿತ್ತೂರು ಚನ್ನಮ್ಮರಾಗಬೇಕು ಎಂದರು.
ಸಮಾಜದಲ್ಲಿ ಪರಾಕ್ರಮ ನಿರ್ಮಾಣವಾಗಬೇಕು. ಉತ್ತರ ಪ್ರದೇಶದಲ್ಲಿ ಸಾವಿರಾರು ಜನರು ರಾಮಜಾನಕಿ ಲಾಠಿ ಹಿಡಿದು ಹೋರಟರು. ಮತಾಂಧರು ಯಾರೂ ಮುಂದೆ ಬರಲಿಲ್ಲ.
ರಾಮ ಮಂದಿರ ನಿರ್ಮಾಣಕ್ಕಾಗಿ ದಾವಣಗೆರೆಯಲ್ಲಿ ಗಲಭೆ ಮಾಡಿದರು‌. ಅದರಲ್ಲಿ ಹಿಂದೂಗಳು ಪರಾಕ್ರಮ ಮೆರೆದರು. ಕಳೆದ 2002ರಲ್ಲಿ ಗುಜರಾತನ ರೈಲ್ವೆಯಲ್ಲಿ ಮುಸ್ಲಿಮ್ ಯುವಕ ಹತ್ತಾರು ಸಾವಿರ ಹಿಂದೂಗಳ ನೋಡಿ ಕಣ್ಣೀರು ಬಂದಾಗ ಸಂತೋಷವಾಗಿತ್ತು. ಈಗ ಯಾರೂ ಮುಸ್ಲಿಮ್ ರು ಗುಜರಾತಿನಲ್ಲಿ ಬಾಲ‌‌ ಬಿಚ್ಚುತ್ತಿಲ್ಲ ಎಂದರು.
ಶ್ರೀ

Total Views 33
RELATED ARTICLES

Most Popular

Recent Comments

KNN City News
Home
E-Paper