– ತಕ್ಷಣ ತಮ್ಮದೇ ಆಸ್ಪತ್ರೆಯ ಆ್ಯಂಬುಲೇನ್ಸ್ ಕರೆಯಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ
ಕನ್ನಡಮ್ಮ ಸುದ್ದಿ-ಕೊಪ್ಪಳ: ರಸ್ತೆ ಬದಿಯಲ್ಲಿ ಅಪಘಾತವಾಗಿ ಜೀವನ್ಮರಣ ಹೋರಾಟದಲ್ಲಿದ್ದ ಬೈಕ್ ಸವಾರನ ಜೀವವನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿರುವ ವೈದ್ಯ ಬಸವರಾಜ ಕ್ಯಾವಟರ್ ಅವರು ಶನಿವಾರ ಕಾಪಾಡಿದ್ದಾರೆ.
ತಾಲೂಕಿನ ಹಟ್ಟಿ ಕ್ರಾಸ್ ಬಳಿ ಬೈಕ್ ಮತ್ತು ಕಾರ್ ನಡುವೆ ಅಪಘಾತವಾಗಿ ಬೈಕ್ ಮೇಲಿದ್ದ ಬೊಮ್ಮನಾಳ ಗ್ರಾಮದ ಶರಣಪ್ಪ ಕೆಳಗೆ ಬಿದ್ದಿದ್ದ. ಈ ವೇಳೆ ಹಿಂಬದಿಯಿಂದ ಬಂದ ಟ್ರ್ಯಾಕ್ಟರ್ ಬೈಕ ಸವಾರನ ಕಾಲಿನ ಮೇಲೆ ಹರಿದು ಹೋಗಿತ್ತು. ಅಲ್ಲದೆ, ಕಾಲು ನಜ್ಜುಗುಜ್ಜಾಗಿತ್ತು.ಇದರಿಂದ ತೀವ್ರ ರಕ್ತಸ್ರಾವವಾಗಿ ನಿತ್ರಾಣಗೊಂಡು ಸ್ಥಳದಲ್ಲೇ ಸಾವು ಬದುಕಿನ ನಡುವೆ ಬೈಕ್ ಸವಾರ ಒದ್ದಾಡ್ಡಿದ್ದಾನೆ. ಘಟನೆ ನಡೆದು 40 ಕ್ಕೂ ಹೆಚ್ಚು ನಿಮಿಷವಾದರೂ ನೆರೆದಿದ್ದ ಸ್ಥಳೀಯರು ಆಂಬ್ಹುಲೇನ್ಸ್ ಹಾಗೂ ಸಹಾಯಕ್ಕಾಗಿ ಪರದಾಡುತ್ತಿದ್ದರು..
ಈ ವೇಳೆ ಕುಷ್ಟಗಿ ಕಡೆಯಿಂದ ಕೊಪ್ಪಳಕ್ಕೆ ಕಡೆಗೆ ವೈದ್ಯ ಬಸವರಾಜ ಕ್ಯಾವಟರ್ ಅವರು ಬರುತ್ತಿರುವಾಗ ಅಪಘಾತವಾಗಿ ಬೈಕ್ ಸವಾರ ಕೆಳಗಡೆ ನಿತ್ರಾಣವಾಗಿ ಬಿದ್ದಿರುವುದನ್ನು ಗಮನಿಸಿದ್ದಾರೆ. ಸರಕಾರಿ ಆಂಬ್ಯುಲೇನ್ಸ್ ಬರುವುದು ಲೇಟ್ ಆಗುತ್ತಿರುವುದನ್ನು ಗಮನಿಸಿ, ಅಲ್ಲದೆ, ಸವಾರನ ಜತೆಗೆ ಕುಟುಂಬಸ್ಥರು ಯಾರು ಇರಲಿಲ್ಲ. ಹೀಗಾಗಿ ಕ್ಯಾವಟರ್ ಅವರು ತಾವೇ ಮುಂದೆ ನಿಂತು, ಕೂಡಲೇ ತಮ್ಮದೇ ಆಸ್ಪತ್ರೆಯ ಆ್ಯಂಬುಲೇನ್ಸ್ ಕರೆಯಿಸಿ, ಆಸ್ಪತ್ರೆಗೆ ಮಾಡಿಸಿದ್ದಾರೆ.
ಕುಷ್ಟಗಿ ಕಡೆಯಿಂದ ಕೊಪ್ಪಳಕ್ಕೆ ಬರುತ್ತಿರುವಾಗ ಹಟ್ಟಿ ಕ್ರಾಸ್ ಬಳಿ ಬೈಕ್ ಸವಾರ ಅಪಘಾತವಾಗಿ ಕೆಳಗೆ ಬಿದ್ದು ಸಾವು– ಬದುಕು ನಡುವೆ ಹೋರಾಡುತ್ತಿದ್ದ. ಕೂಡಲೇ ಆಂಬ್ಯುಲೇನ್ಸ್ ಕರೆಯಿಸಿ, ನಮ್ಮದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುವೆ. : ಬಸವರಾಜ ಕ್ಯಾವಟರ್, ವೈದ್ಯರು, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರು,
