Monday, November 23, 2026
HomeBelagaviಹಿಂದೂ ವಿರೋಧಿಗಳಿಗೆ ಎಚ್ಚರಿಕೆ ಕೊಟ್ಟ ಜೀತೇಂದ್ರನಾಥ್ ಸ್ವಾಮೀಜಿ

ಹಿಂದೂ ವಿರೋಧಿಗಳಿಗೆ ಎಚ್ಚರಿಕೆ ಕೊಟ್ಟ ಜೀತೇಂದ್ರನಾಥ್ ಸ್ವಾಮೀಜಿ

 

ಬೆಳಗಾವಿ
ಗೋ ಹತ್ಯೆ, ಗೋ ರಕ್ಷಣೆ ಮಾಡಬೇಕೆಂದು ಹಿಂದೂಗಳು ಹೋರಾಟ ಮಾಡುವ ಪ್ರಸಂಗ ಭಾರತ ದೇಶದಲ್ಲಿ ನಿರಂತರವಾಗಿ ನಡೆಯುತ್ತಿದೆ. ನಮ್ಮ ದೇಶದಲ್ಲಿದ್ದುಕೊಂಡು ದೇಶ ಒಡೆಯುವ ಕುತಂತ್ರ ಮಾಡುವವರೆಗೆ ದೇಶ ದ್ರೋಹಿ ಎಂದರೆ ತಪ್ಪು ಏನು ಎಂದು ಶ್ರೀ ಜೀತೇಂದ್ರಾನಾಥ ಸ್ವಾಮೀಜಿ ಹೇಳಿದರು.
ಭಾನುವಾರ ಬೆಳಗಾವಿ ತಾಲೂಕಿನ ಸುಳೆಬಾವಿ ಗ್ರಾಮದಲ್ಲಿ ಯದ್ದಲಭಾವಿ ಹಟ್ಟಿ ರೋಡ್ ನ ಹುಲಿಯಮ್ಮನ ತೋಟದಲ್ಲಿ ಬಟೆಂಗೆ ತೋ ಕಂಟೆಗೆ ಎಕ್ ಹೈ ತೋ ಸೆಫ್ ಹೈ ಹಿಂದೂ ಪರ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಭಾರತವನ್ನು ಕೆಲವರು ಪಾಕಿಸ್ತಾನ ಮಾಡಿದ್ದಾರೆ. ಅದನ್ನು ಹಿಂದೂಗಳು ಭಾರತವನ್ನಾಗಿ ಮಾಡುತ್ತೇವೆ. ದೇಶವನ್ನು ಒಡೆದು ಪಾಕಿಸ್ತಾನ ಮಾಡಿದವರು ಯಾರೂ ? ಭಾರತದಲ್ಲಿ ಭಯೋತ್ಪಾದನೆ ಮಾಡಲು ಆಗುವುದಿಲ್ಲ ಎಂದು ಪಾಕಿಸ್ತಾನವನ್ನು ಮುಸ್ಲಿಮ್ ರಿಗೆ ಮಾಡಿಕೊಟ್ಟರು ಎಂದರು.
ಭಾರತ ದೇಶದಲ್ಲಿ ಇದ್ದುಕೊಂಡು ದೇಶ ಒಡೆಯುವ ದೇಶ ದ್ರೋಹಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೊಡಿ. ದೇಶದಲ್ಲಿ ಈಗ ಮುಸ್ಲಿಮ್ ಮಹಿಳೆಯರು ಹಿಂದೂಗಳಾಗಿ ಪರಿವರ್ತನೆಯಾಗುತ್ತಿದ್ದಾರೆ. ಇದು ನಮ್ಮ ಹಿಂದೂಗಳ ಶಕ್ತಿ ಎಂದರು.
ಜಾತಿ, ಮತ, ಪಂಥ ಮರೆತು ಹಿಂದೂಗಳು ಒಂದಾಗಬೇಕು. ಆರ್ ಎನ್ ಐ, ರಾ, ಪಿಎಫ್ ಐ ಅಟ್ಟಹಾಸ ಮೆರೆಯುತ್ತಿದೆ. ಹಿಂದೂಗಳ ಮೇಲೆ, ಪೊಲೀಸ್ ಸಿಬ್ಬಂದಿಗಳು ಹಾಗೂ ದೇಶದ ಗುಪ್ತಚರ ದಳ ಇಲಾಖೆ ಧ್ವಂಸ ಮಾಡಲು ಹುನ್ನಾರ ನಡೆಸಿದೆ. ಎಲ್ಲ ಹಿಂದೂಗಳ ಮನೆಯಲ್ಲಿ ಹಿಂದೂ ಗ್ರಂಥಗಳು ಇರಬೇಕು ಎಂದರು.

Total Views 90
RELATED ARTICLES

Most Popular

Recent Comments

KNN City News
Home
E-Paper