Monday, November 23, 2026
HomeKoppalತಳಕಲ್ ಗ್ರಾಮದಲ್ಲಿ ಬಾಲ ಮೇಳ : ಅಂಗನವಾಡಿ ಮಕ್ಕಳ ಜೊತೆ ಮಗುವಾದ ಡಿಸಿ ನಲಿನ್ ಅತುಲ್

ತಳಕಲ್ ಗ್ರಾಮದಲ್ಲಿ ಬಾಲ ಮೇಳ : ಅಂಗನವಾಡಿ ಮಕ್ಕಳ ಜೊತೆ ಮಗುವಾದ ಡಿಸಿ ನಲಿನ್ ಅತುಲ್

ಕನ್ನಡಮ್ಮ ಸುದ್ದಿ-ಕೊಪ್ಪಳ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಟಾಟಾ ಕಲಿಕಾ ಟ್ರಸ್ಟ್ ಸಂಯೋಗದಲ್ಲಿ  ತಳಕಲ್ ನಲ್ಲಿ ಜರುಗಿದ ಬಾಲ ಮೇಳ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಮಕ್ಕಳೊಂದಿಗೆ ಮಗುವಾಗಿ ಖುಷಿಪಟ್ಟರು.

ಅಂಗನವಾಡಿ ಮಕ್ಕಳ  “ಬಾಲ ಮೇಳ ”  ಕಾರ್ಯಕ್ರಮದ ಉದ್ಘಾಟನೆ ಮಾಡಿದ  ಜಿಲ್ಲಾಧಿಕಾರಿ ನಳಿನ ಅತುಲ್  ಅವರು ಮಕ್ಕಳ ಆಟ, ಪಾಠ, ಕಲಿಕೆಯಲ್ಲಿ ಬೆರತು ಮಕ್ಕಳಿಗೆ ಪ್ರೋತ್ಸಾಹ ನೀಡಿ, ಮಕ್ಕಳ ಉಜ್ಜವಳ ಭವಿಷ್ಯ ಮತ್ತು ಅವರ ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಗಮನ ನೀಡಬೇಕು, ಮಕ್ಕಳ ಅಪೌಷ್ಠಿಕ ನಿವಾರಣೆಯಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡು ನಿವಾರಣೆಗೆ ಗಮನಹರಿಸಲು ತಿಳಿಸಿದರು.

ಕಾರ್ಯಕ್ರಮದಲ್ಲಿ  ಗ್ರಾಮ ಪಂಚಾಯಿತಿ  ಅಧ್ಯಕ್ಷೆ ಜಹೀರಾ ಬೇಗಂ ಜಾಕಿರ್ ಹುಸೇನ್,  ಉಪಾಧ್ಯಕ್ಷರು, ಗ್ರಾಮ ಪಂಚಾಯತಿ ಸರ್ವ ಸದಸ್ಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಪಿ. ವಾಯ್.ಶೆಟ್ಟಪ್ಪನವರ್,  ಜಿಲ್ಲಾ ನಿರೂಪಣಾಧಿಕಾರಿ ಗಂಗಪ್ಪ, ಸಿಡಿಪಿಒ ಬೆಟ್ಟದಪ್ಪ ಮಾಳೆ ಕೊಪ್ಪ , ಕಲಿಕೆ ಟಾಟಾ ಟ್ರಸ್ಟ್ ಜಿಲ್ಲಾ ವ್ಯವಸ್ಥಾಪಕ  ಅಶೋಕ್,  ಜಿಲ್ಲಾ ಸಂಪನ್ಮೂಲ ವ್ಯಕ್ತಿ ಜಯಲಕ್ಷ್ಮಿ ಮೆಣಸಿನ ಕಾಯಿ, ಹಿರಿಯ    ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಮುದ್ದು ಮಕ್ಕಳು, ಮಕ್ಕಳ ಪಾಲಕ ಪೋಷಕರು ಇದ್ದರು.

Total Views 24
RELATED ARTICLES

Most Popular

Recent Comments

KNN City News
Home
E-Paper