Thursday, November 19, 2026
HomeKoppalಕೊಪ್ಪಳ ನಗರದಲ್ಲಿ ಫೆ. 13 ರವರೆಗೆ ಇ-ಆಸ್ತಿ ತಂತ್ರಾಂಶದ ಶಿಬಿರ: ಪೌರಾಯುಕ್ತ ಗಣಪತಿ ಪಾಟೀಲ

ಕೊಪ್ಪಳ ನಗರದಲ್ಲಿ ಫೆ. 13 ರವರೆಗೆ ಇ-ಆಸ್ತಿ ತಂತ್ರಾಂಶದ ಶಿಬಿರ: ಪೌರಾಯುಕ್ತ ಗಣಪತಿ ಪಾಟೀಲ

ಕನ್ನಡಮ್ಮ ಸುದ್ದಿ-ಕೊಪ್ಪಳ : ನಗರಸಭೆ ವ್ಯಾಪ್ತಿಯಲ್ಲಿ ಇ-ಆಸ್ತಿ ತಂತ್ರಾಂಶವನ್ನು ಸರಳೀಕರಣಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಹಿನ್ನಲೇಯಲ್ಲಿ ಇ-ಆಸ್ತಿ ತಂತ್ರಾಂಶದ ಕುರಿತು ಕೊಪ್ಪಳ ನಗರಸಭೆಯಿಂದ 13 ಫೆಬ್ರವರಿ 2025 ರವರೆಗೆ ನಗರದ ವಿವಿಧ ವಾರ್ಡ್‍ಳಲ್ಲಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಪೌರಾಯುಕ್ತರಾದ ಗಣಪತಿ ಪಾಟೀಲ್ ತಿಳಿಸಿದ್ದಾರೆ.

ಸಾರ್ವಜನಿಕರಿಂದ ಆಸ್ತಿ ಕಣಜ ತಂತ್ರಾಂಶದಲ್ಲಿ ಅವಶ್ಯವಿರುವ ದಾಖಲೆಗಳ ಪ್ರತಿಗಳನ್ನು ಪಡೆದು ಮುಂಬರುವ ದಿನಗಳಲ್ಲಿ ಸರ್ಕಾರದಿಂದ “ಬಿ” ಖಾತಾ ಉತಾರ ವಿತರಿಸಬೇಕಾಗಿರುವುದರಿಂದ ನಗರಸಭೆ ವ್ಯಾಪ್ತಿಯ ಆಸ್ತಿ ತೆರಿಗೆ ಪಾವತಿದಾರರಿಗೆ ಆಸ್ತಿಗಳ ದಾಖಲೆಗಳನ್ನು ಸಂಗ್ರಹಿಸುವ ಹಾಗೂ ಆಸ್ತಿ ಕಣಜ ತಂತ್ರಾಂಶದಲ್ಲಿ ದಾಖಲೆಗಳನ್ನು ಕಾಲೋಚಿತಗೊಳಿಸಬೇಕಾಗಿರುವುದರಿಂದ ಶಿಬಿರಗಳನ್ನು ನಗರದ ವಿವಿಧ ಸ್ಥಳಗಳಲ್ಲಿ ಆಯೋಜಿಸಲಾಗಿದೆ.

ಈಗಾಗಲೆ 1 ರಿಂದ 3ನೇ  ವಾರ್ಡ್‍ಳ ಶಿಬಿರವು ಫೆಬ್ರವರಿ 3 ರಿಂದ ನಗರದ ಕಾತರಕಿ ರಸ್ತೆಯ ಸಿರಸಪ್ಪಯ್ಯನ ಮಠ, 4 ಮತ್ತು 12ನೇ  ವಾರ್ಡ್‍ಗಳ ಶಿಬಿರವು ಸಾಲಾರಜಂಗ್ ರಸ್ತೆಯ ಜೆ.ಪಿ ಮಾರುಕಟ್ಟೆಯಲ್ಲಿ ಜರುಗಿದೆ. ಆಯಾ ವಾರ್ಡಿನ ಸಾರ್ವಜನಿಕರು ಶಿಬಿರ ಸ್ಥಳಕ್ಕೆ ಭೇಟಿ ನೀಡಿ ತಮ್ಮ ತಮ್ಮ ಆಸ್ತಿಗಳ ದಾಖಲಾತಿಗಳನ್ನು ಅಲ್ಲಿ ನಿಯೋಜಿಸಿರುವ ಸಿಬ್ಬಂದಿ ಅಥವಾ ಅಧಿಕಾರಿಗಳಿಗೆ ನೀಡಲು ಪೌರಾಯುಕ್ತರಾದ ಗಣಪತಿ ಪಾಟೀಲ ತಿಳಿಸಿರುವರು.

*ಶಿಬಿರ ದಿನಾಂಕ ಸ್ಥಳ;* ಫೆ. 5ರಂದು ಗಡಿಯಾರ ಕಂಬದ ಹತ್ತಿರ ಇರುವ ಹಿರೇಮಸೂತಿ ಸಮೀಪ, 10, 11, 13, 14, 15 & 16ನೇ  ವಾರ್ಡ್‍ಳಗ ಶಿಬಿರವು ಫೆ. 6ರಂದು ಕುಂಬಾರ ಓಣಿಯ ಪ್ಯಾಟಿ ಈಶ್ವರ ದೇವಸ್ಥಾನದ ಹತ್ತಿರ, 17 ರಿಂದ 20ನೇ  ವಾರ್ಡ್‍ಳ ಶಿಬಿರವು ಫೆ. 7 ರಂದು ನಗರದ ಬಹಾರಪೇಟ್ ಶಾಲೆ ಹತ್ತಿರ ನಡೆಯಲಿದೆ. 21 ರಿಂದ 23ನೇ  ವಾರ್ಡ್‍ಳ ಶಿಬಿರವು ಫೆ. 10 ರಂದು ಗದಗ ರಸ್ತೆಯ ಮೈನಳ್ಳಿ ಗೌಡರ ಮನೆಯ ಹತ್ತಿರ ಜರುಗಲಿದೆ.

24 ರಿಂದ 26ನೇ  ವಾರ್ಡ್‍ಳ ಶಿಬಿರವು ಫೆ. 11ರಂದು ಕಿನ್ನಾಳ ರಸ್ತೆಯ ಐ.ಬಿ ಎದುರಗಡೆ,  27 ರಿಂದ 29ನೇ  ವಾರ್ಡ್‍ಳ ಶಿಬಿರವು ಫೆ. 12ರಂದು ಬಸವೇಶ್ವರ ವೃತ್ತದ ಹತ್ತಿರ (ಗಂಜ್ ಸರ್ಕಲ್) ಹಾಗೂ 30, 31ನೇ  ವಾರ್ಡ್‍ಳ ಶಿಬಿರವು ಫೆ. 13ರಂದು ಹೊಸಪೇಟೆ ರಸ್ತೆಯ ಈಶ್ವರ ಪಾರ್ಕ್‍ನಲ್ಲಿ ಹಮ್ಮಿಕೊಳ್ಳಲಾಗಿದೆ.  ಆಯಾ  ವಾರ್ಡ್‍ಗಳ ಸಾರ್ವಜನಿಕರು ಶಿಬಿರಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳಾದ ನೋಂದಾಯಿತ ಖರೀದಿ ಪತ್ರ, ಹಕ್ಕುಪತ್ರ, ಖಾತಾ ನೋಂದಣಿ, ಬದಲಾವಣೆ ಪ್ರತಿ, 2024-25ನೇ ಸಾಲಿನ ಆಸ್ತಿತೆರಿಗೆ, ನಳದ ತೆರಿಗೆ ಪಾವತಿಯ ಪ್ರತಿ, ಆಸ್ತಿ ಮಾಲೀಕರ ಮತದಾರರ ಗುರುತಿನ ಚೀಟಿ, ಪ್ಯಾನ್, ಡಿ.ಎಲ್ ಅಥವಾ ಪಡಿತರ ಚೀಟಿ, ಆಸ್ತಿ ಮಾಲೀಕರ–ಭಾವಚಿತ್ರ, ಆಸ್ತಿಯ ಭಾವಚಿತ್ರ, ಎನ್.ಎ ಆದೇಶ ಪ್ರತಿ, ಅನುಮೋದಿತ ಲೇಔಟ್ ಪ್ರತಿ, ನಿವೇಶನಗಳ ಬಿಡುಗಡೆ ಆದೇಶ, ಕೆ.ಜೆ.ಪಿ ನಕ್ಷೆ, (ಕಟ್ಟಡ ಇದ್ದಲ್ಲಿ) ಕಟ್ಟಡ ಪರವಾನಿಗೆ, ನಕ್ಷೆ, ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ ಹಾಗೂ ವಿದ್ಯುತ್ ಮೀಟರ್ ಆರ್.ಆರ್ ಸಂಖ್ಯೆ ಇವುಗಳನ್ನು ಸಲ್ಲಿಸಿ ಇ–ಅಸ್ತಿ ತಂತ್ರಾಂಶದಲ್ಲಿ ಅರ್ಹ ಆಸ್ತಿಗಳಿಗೆ ನಮೂನೆ-3ರನ್ನು ಪಡೆಯಲು ಈ ಅವಕಾಶವನ್ನು ಸಾರ್ವಜನಿಕರು, ಆಸ್ತಿ ಮಾಲೀಕರು ಸದುಪಯೋಗಪಡಿಸಿಕೊಳ್ಳಬೇಕು : ಗಣಪತಿ ಪಾಟೀಲ, ಪೌರಾಯುಕ್ತರು, ನಗರಸಭೆ ಕೊಪ್ಪಳ.

Total Views 29
RELATED ARTICLES

Most Popular

Recent Comments

KNN City News
Home
E-Paper