
ಬೆಳಗಾವಿವ
ಡ್ಡರವಾಡಿಯ ಘಟನೆ ಮಾಸುವ ಮುನ್ನವೇ ಬಾಣಂತಿ ಹೆಂಡತಿಯನ್ನು ಮನೆಗೆ ಕಳುಹಿಸಿಕೊಡಲಿಲ್ಲ ಎನ್ನುವ ಕಾರಣಕ್ಕೆ ಅಳಿಯನೇ ಅತ್ತೆಯನ್ನು ಬೆತ್ತಲೆಗೊಳಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ನ್ಯಾಯಕ್ಕಾಗಿ ಅನ್ಯಾಯಕ್ಕೊಳಗಾದ ಕುಟುಂಬ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲೇರಿದೆ. ಕಳೆದ 12 ದಿನಗಳ ಹಿಂದೆಯಷ್ಟೆ ಹೆರಿಗೆಯಾದ ಮಗಳನ್ನು ತನ್ನ ಮನೆಗೆ ಕಳಿಸಿಕೊಡುವಂತೆ ಈ ರೀತಿ ಕೃತ್ಯ ಮಾಡಿದ್ದಾನೆ.
