
ಬೆಳಗಾವಿ
ಮಹಾಂತೇಶ ನಗರದ ಬ್ರಿಡ್ಜ್ ಹಿಂಬದಿಯಲ್ಲಿ ಪಾದಚಾರಿಗೆ ಟಿಪ್ಪರ ಹರಿದ ಪರಿಣಾಮ ಪಾದಚಾರಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಮಹಾಂತೇಶ ನಗರದ ಬ್ರಿಡ್ಜ್ ಬಳಿ ಪಾದಚಾರಿ ನಡೆದುಕೊಂಡು ಹೊರಟಾಗ ಟಿಪ್ಪರ ಹಿಂಬದಿಯಿಂದ ಬಂದು ಹರಿದಿದೆ. ಮೃತಪಟ್ಟ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ. ಬೆಳಗಾವಿ ಉತ್ತರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
