Thursday, November 19, 2026
HomeBelagaviಜಾಗದ ವಿವಾದ: ಎರಡು ಗುಂಪುಗಳ ನಡುವೆ ಮಾರಾಮಾರಿ

ಜಾಗದ ವಿವಾದ: ಎರಡು ಗುಂಪುಗಳ ನಡುವೆ ಮಾರಾಮಾರಿ

ಬೆಳಗಾವಿ
ಖಾನಾಪುರದಲ್ಲಿ ಜಾಗ ವಿವಾದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ವಿದ್ಯಾನಗರದಲ್ಲಿ ಭಾನುವಾರ ನಡೆದಿದೆ.
ಆರೂವರೆ ಎಕರೆ ಜಾಗಕ್ಕಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ತಮಗೆ ಸೇರಿದ ಜಾಗ ಎಂದು ಜೆಸಿಬಿ ಸಮೇತ ಸ್ಥಳಕ್ಕೆ ಬಂದಿದ್ದ ಒಂದು ಗುಂಪು. ಸಿರ‌್ಯಾಮಿಕ್ ಫ್ಯಾಕ್ಟರಿ ವರ್ಕರ್ಸ್ ಗೆ ಸೇರಿದ ಜಾಗ ಎಂದು ಸ್ಥಳಕ್ಕೆ ಬಂದಿದ್ದ ಕಾರ್ಖಾನೆ ಸಿಬ್ಬಂದಿಗಳ ನಡುವೆ ಮಾರಾಮಾರಿಯಾಗಿದೆ.
ಆರೂವರೆ ಎಕರೆ ಜಾಗದಲ್ಲಿ ನಿವೇಶನ ಮಾಡಿ ಹಂಚಿಕೊಳ್ಳಲು ಮುಂದಾಗಿದ್ದ ಸಿಬ್ಬಂದಿ.ಖಾನಾಪುರ ಕೋರ್ಟ್ ದಿಂದ ತಮ್ಮ ಪರವಾಗಿ ಆದೇಶ ಆಗಿದೆ ಎಂದು ನೂರಕ್ಕೂ ಅಧಿಕ ಸಿಬ್ಬಂದಿ ಕೆಲಸಕ್ಕೆ ಬಂದಿದ್ದರು. ಭಾನುವಾರ ಖಾನಾಪುರದ ಶಾಹುನಗರದ ನಿವಾಸಿಗಳಿಂದ ಅಟ್ಯಾಕ್ ಮಾಡಿದ್ದಾರೆ. ಜಾಗ ತಮ್ಮದು ಎಂದು ಕೆಲಸ ಬಿಡಿಸಲು ಬಂದಿದ್ದ ಶಾಹುನಗರದ ನಿವಾಸಿಗಳು ಆಗ ಈ ವೇಳೆ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ.
ಸಿರ‌್ಯಾಮಿಕ್ ಕಾರ್ಖಾನೆ ಸಿಬ್ಬಂದಿಗಳ ಮೇಲೆ ಕಲ್ಲು ತೂರಿ ಹಲ್ಲೆ.
ಇಬ್ಬರಿಗೆ ಗಂಭೀರ ಗಾಯ, ಹದಿನೈದು ಜನರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆ ದಾಖಲು ಗಾಯಾಳುಗಳಿಗೆ ಚಿಕಿತ್ಸೆ ದಾಖಲಿಸಲಾಗಿದೆ. ಸ್ಥಳದಲ್ಲಿ ಬಿಗುವಿಣ ವಾತಾವರಣ ಹಿನ್ನೆಲೆ ಸ್ಥಳದಲ್ಲೇ ಪೊಲೀಸರು ಬಿಡುಬಿಟ್ಟಿದ್ದಾರೆ. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

Total Views 124
RELATED ARTICLES

Most Popular

Recent Comments

KNN City News
Home
E-Paper