
ಬೆಳಗಾವಿ
ಕುಡಿದು ಮೋಜು ಮಸ್ತಿ ಮಾಡಿ ಕ್ಷುಲ್ಲಕ ಕಾರಣಕ್ಕೆ ಗೆಳೆಯರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಖಾನಾಪುರ ತಾಲೂಕಿನ ಗಾಡಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ಖಾನಾಪುರ ತಾಲೂಕಿನ ಬಲೋಗಾ ಗ್ರಾಮದ ಶಿವನಗೌಡ ಪಾಟೀಲ್ (47)ನ್ನು ಭೀಕರವಾಗಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ. ಚನ್ನಮ್ಮನ ಕಿತ್ತೂರು ತಾಲೂಕಿನ ದಾಸ್ತಿಕೊಪ್ಪ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮ ದೇವಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಮಂಗಳವಾರ ಶಿವನಗೌಡ ತಮ್ಮ ಊರಿನಿಂದ ಪತ್ನಿ ಮತ್ತು ಮಕ್ಕಳೊಂದಿಗೆ ತೆರಳಿದ್ದರು.
ಜಾತ್ರೆ ಮುಗಿಸಿಕೊಂಡು ಪತ್ನಿ ಹಾಗೂ ಮಕ್ಕಳನ್ನು ದಾಸ್ತಿಕೊಪ್ಪದ ತಮ್ಮ ಸಂಬಂಧಿಕರ ಮನೆಯಲ್ಲಿ ಬಿಟ್ಟು ಶಿವನಗೌಡ ತನ್ನ ಊರಿಗೆ ಮರಳುತ್ತಿದ್ದರು. ರಸ್ತೆಯ ಪಕ್ಕದ ಗಾಡಿಕೊಪ್ಪದ ಬಳಿ ಎಂ.ಕೆ.ಹುಬ್ಬಳ್ಳಿ- ಪಾರಿಶ್ವಾಡ ಮುಖ್ಯ ರಸ್ತೆಯ ಪಕ್ಕದ ಜಮೀನಿನಲ್ಲಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಶಿವನಗೌಡ ಪಾಟೀಲ್ ಸಹೋದರ ಸಣ್ಣಗೌಡ ಪಾಟೀಲ್ ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಿವನಗೌಡ ಕೊಲೆಯಾದ ಸ್ಥಳದಲ್ಲಿ ಸರಾಯಿ ಬಾಟಲಿ ಸಿಕ್ಕಿದ್ದು ಆರೋಪಿಗಳಿಗೆ ಪೊಲೀಸರು ಬಲೆ ಬಿಸಿದ್ದಾರೆ. ಜಾತ್ರೆ ಮುಗಿಸಿಕೊಂಡು ಸ್ನೇಹಿತರ ಜೊತೆಗೆ ಪಾರ್ಟಿ ಮಾಡಿ ಮೋಜು ಮಸ್ತಿ ಬಳಿಕ ಭೀಕರವಾಗಿ ಕಲ್ಲಿನಿಂದ ಜಜ್ಜಿ ಕೊಲೆಯಾದ ಶಿವನಗೌಡ ಪಾಟೀಲ್ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
