
ಬೆಳಗಾವಿ
ಬೆಳಗಾವಿಯಲ್ಲಿ ಎಂಇಎಸ್ ನ ಸೃತಿ ಭವನ ನಿರ್ಮಾಣಕ್ಕೆ ಮಹಾರಾಷ್ಟ್ರ ಸರಕಾರ 10 ಕೋಟಿ ರೂ. ಅನುದಾನ ನೀಡಿದ ಹಿನ್ನೆಲೆಯಲ್ಲಿ ಶನಿವಾರ ಹಿಂಡಲಗಾ ಗ್ರಾಮದಲ್ಲಿ ಕಟ್ಟಡ ಕಾಮಗಾರಿಗೆ ಪೂಜೆ ನೆರವೆರಿಸಿದರು.
ಕಟ್ಟಡ ಕಾಮಗಾರಿ ಪೂಜೆ ನಡೆಸಿದರೂ ಜಿಲ್ಲಾಡಳಿತ ಹಾಗೂ ಕರ್ನಾಟಕ ಸರಕಾರ ಇದನ್ನು ತಡೆಯುವ ಪ್ರಯತ್ನ ಮಾಡದೆ ಇರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಯ ಪುಂಡಾಟ ಹೆಚ್ಚಿರುವಾಗಲೇ ಈಗ 10 ಕೋಟಿ ರೂ. ಅನುದಾನ ನೀಡಿ ಮಹಾರಾಷ್ಟ್ರ ಸರಕಾರ ಸೃತಿ ಭವನ ನಿರ್ಮಾಣ ಮಾಡಲು ಹೊರಟಿರುವುದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.
