Thursday, November 19, 2026
HomeBelagaviಕಾಶಪ್ಪನವರ ಪರ ಬ್ಯಾಟ್ ಬಿಸಿದ ಶಾಸಕ ಕಾಗೆ: ಒಬ್ಬ ವ್ಯಕ್ತಿ ವಿರುದ್ಧ ಸ್ವಾಮೀಜಿ‌ ಹೋರಾಟ ಮಾಡಬಾರದು

ಕಾಶಪ್ಪನವರ ಪರ ಬ್ಯಾಟ್ ಬಿಸಿದ ಶಾಸಕ ಕಾಗೆ: ಒಬ್ಬ ವ್ಯಕ್ತಿ ವಿರುದ್ಧ ಸ್ವಾಮೀಜಿ‌ ಹೋರಾಟ ಮಾಡಬಾರದು

ಚಿಕ್ಕೋಡಿ
ಒಬ್ಬ ವ್ಯಕ್ತಿಯ ಪರವಾಗಿ ಸಮಾಜದ ಗುರುಗಳಾಗಿ ಪಂಚಮಸಾಲಿ ಸ್ವಾಮೀಜಿ ಹೋರಾಟ ಮಾಡಬಾರದು ಎಂದು ಕಾಗವಾಡ ಶಾಸಕ ರಾಜು ಕಾಗೆ ವಿಜಯಾನಂದ ಕಾಶಪ್ಪನವರ ಪರ ಬ್ಯಾಟ್ ಬಿಸಿದರು.
ಸೋಮವಾರ ‌ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತ‌ನಾಡಿದರು. ಪಂಚಮಸಾಲಿ ಸ್ವಾಮೀಜಿ ಒಬ್ಬ ವ್ಯಕ್ತಿ ಪರ ಹೋರಾಟ ಮಾಡುತ್ತಿರುವುದು ಯಾರಿಗಾದರೂ ಅದು ತಪ್ಪು ಎನಿಸುತ್ತದೆ. ಸ್ವಾಮೀಜಿ ಅವರು ಸಮಾಜದ ಪರ ಹೋರಾಟ ಮಾಡಲಿ. ಯತ್ನಾಳ ಪರ ಹೋರಾಟ ಮಾಡುತ್ತಿರುವುದು ತಪ್ಪು ಎಂದರು.
ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆ ಮಾಡಿದ್ದು ಪಕ್ಷದ ಆಂತರಿಕ ವಿಚಾರ. ಪಕ್ಷದ ಆಂತರಿಕ ವಿಚಾರದಲ್ಲಿ ಮಠಾಧೀಶರು ಹೋಗಬಾರದು. ಪಂಚಮಸಾಲಿ ೨ ಎ ಮೀಸಲಾತಿ ಬಿಟ್ಟು ರಾಜಕೀಯ ಹೋರಾಟಕ್ಕೆ ಶ್ರೀಗಳು ಬರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

Total Views 148
RELATED ARTICLES

Most Popular

Recent Comments

KNN City News
Home
E-Paper