
ಬೆಳಗಾವಿ
ಜಾತಿ ಗಣತಿ ಬಗ್ಗೆ ರಾಜ್ಯ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿದ್ದಾರೆ. ಸಿಎಂ ಅವರು ನೋಡುತ್ತೇನೆ ಎಂದಿದ್ದಾರೆ. ಅವರಲ್ಲಿಯೇ ಗೊಂದಲ ಇದೆ. ಆದರೆ ಬೇರೆ ಬೇರೆ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾತೆರೆ ಸಿಎಂ ಸಿದ್ದರಾಮಯ್ಯ ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ಶನಿವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರತಿಯೊಂದು ಮನೆಗೆ ಹೋಗಿ ಜಾತಿ ಗಣತಿ ಸರ್ವೆ ಮಾಡಬೇಕು. ಅದನ್ನು ಸರಕಾರ ಮಾಡಿಯೇ ಇಲ್ಲ. ಮುಸ್ಲಿಮ್ ಜನಸಂಖ್ಯೆ 75 ಲಕ್ಷ ಇದೆ ಎಂದು ತೋರಿಸಲು ಹೊರಟ್ಟಿದ್ದಾರೆ. ಗೊಂದಲ ಇರುವ ವರದಿಯನ್ನು ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡುವ ಆತುರ ಏನಿತ್ತು ಸರಕಾರಕ್ಕೆ ಎಂದು ಪ್ರಶ್ನಿಸಿದರು.
ಸೈದ್ಧಾಂತಿಕವಾಗಿ ಜಾತಿ ಗಣತಿಯನ್ನು ಸರಕಾರ ಮಾಡಲಿ. ಇದರಿಂದ ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಸಚಿವ ಸಂಪುಟದಲ್ಲಿ ಜಾತಿ ಗಣತಿಯ ಬಗ್ಗೆ ಒಪ್ಪಿಗೆ ಸೂಚಿಸಿರುವುದಕ್ಕೆ ನಮ್ಮ ವಿರೋಧ ಇದೆ. ಸಿದ್ದರಾಮಯ್ಯ ಅವರಿಗೆ ಒಲ್ಲದ ಮನಸ್ಸಿಲ್ಲದೆ ಇದನ್ನು ಒಪ್ಪಿಗೆ ಸೂಚಿಸಿರಬಹುದು ಎಂದರು.
ಸಿದ್ದರಾಮಯ್ಯ ಸರಕಾರ ಏನೋ ಮಾಡಿದರೂ ಕಂಟಕ ಇದ್ದೆ ಇದೆ. ನಮ್ಮ ಸರಕಾರ ಇದ್ದಾಗ ಭ್ರಷ್ಟಾಚಾರ ಆರೋಪ ಮಾಡಿದ್ದ ಕಾಂಗ್ರೆಸ್ ಅವರ ಸರಕಾರದಲ್ಲಿ ಈಗ ತನಿಖೆಗೆ ಮಾಡಲು ಸ್ಟಂಟ್ ಮಾಡುತ್ತಿದೆ. ಗುತ್ತಿಗೆದಾರರ ಸಂಘ ಎಲ್ಲಿಯೂ ಭ್ರಷ್ಟಾಚಾರ ನಡೆದಿಲ್ಲ ಎಂದರು. ಈಗ ಮತ್ತೇ ಎಸ್ಐಟಿ ತನಿಖೆ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದರು.
ಬಿಜೆಪಿಯ ಜನಾಕ್ರೋಶ ಯಾತ್ರೆ ಆರಂಭವಾದ ಮೇಲೆ ಕಾಂಗ್ರೆಸ್ ಈಗ ಏ.17 ರಂದು ಕೇಂದ್ರ ಸರಕಾರದ ವಿರುದ್ಧ ಹೋರಾಟ ನಡೆಸಿದ್ದಾರೆ ಎಂದು ಲೇವಡಿ ಮಾಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ಮಾಜಿ ಶಾಸಕ ವಿ.ಐ.ಪಾಟೀಲ್, ಮಾಜಿ ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
