Monday, November 23, 2026
HomeBelagaviನಾಳೆಯಿಂದ ನಾವಲಗಟ್ಟಿ ಹನುಮಂತ ದೇವರ ಜಾತ್ರಾ ಮಹೋತ್ಸವ

ನಾಳೆಯಿಂದ ನಾವಲಗಟ್ಟಿ ಹನುಮಂತ ದೇವರ ಜಾತ್ರಾ ಮಹೋತ್ಸವ

 

ಬೈಲಹೊಂಗಲ

ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದ ಶ್ರೀ ಮಾರುತಿ ದೇವರ ಜಾತ್ರಾ‌ ಮಹೋತ್ಸವ ಏ. 15ರಿಂದ  ಏ.19 ವರೆಗೆ ವಿಜ್ರಂಭನೆಯಿಂದ ಜರುಗಲಿದೆ.
ಏ. 15ರಂದು ಯರಗೊಪ್ಪ ಲೀಲಾಮಠದ ಶ್ರೀ ನಿತ್ಯಾನಂದ ಸ್ವಾಮಿಗಳಿಂದ ಕಳಸಾರೋಹಣ, ಹಾಗೂ ಗ್ರಾಮ ದೇವಿಯ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ.  ಚಿಕ್ಕೋಡಿ ತಾಲೂಕಿನ ಜೀನವಾಡ ಗ್ರಾಮದ ಶ್ರೀ ಭೀರಲಿಂಗೇಶ್ವರ ಸಂಘ ಹಾಗೂ ಬೆಳಗಾವಿ ತಾಲೂಕಿನ ಪೀರನವಾಡಿಯ ಶ್ರೀ ಭೀರಲಿಂಗೇಶ್ವರ ಡೋಳ್ಳಿನ ಗಾಯನ ಸಂಘಗಳಿಂದ ರಾತ್ರಿ 10ಗಂಟೆಗೆ ಡೋಳ್ಳಿನ ಪದಗಳು ಜರುಗಲಿದೆ.
ಏ.16 ರಂದು ರಾತ್ರಿ 8ಗಂಟೆಗೆ   ಮಾಜಿ ಸೈನಿಕರಿಗೆ ಸತ್ಕಾರ ಸಮಾರಂಭ ಜರುಗಲಿದೆ. ನಂತರ  ನಾವಲಗಟ್ಟಿ ಗ್ರಾಮದ ಶ್ರೀ ಮಾರುತಿ ಭಜನಾ ಮಂಡಳ ಹಾಗೂ ಗಿರಿಯಾಲದ ಶ್ರೀ ಕಲ್ಲೇಶ್ವರ ಭಜನಾ ಮಂಡಳದಿಂದ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಏ.17ರಂದು ಬೆಳಿಗ್ಗೆ 5ಗಂಟೆಗೆ ಶ್ರೀ ಮಾರುತಿ ದೇವರ ರುದ್ರಾಭೀಷೇಕ ಹಾಗೂ ಮಧ್ಯಾಹ್ನ12ಗಂಟೆಯ ನಂತರ ಮಹಾ ಪ್ರಸಾದ . ನಂತರ ದೇವಸ್ಥಾನದ ಬಳಿ ದ್ವಿಚಕ್ರ ವಾಹನ ನಿಧಾನವಾಗಿ ಚಲಿಸುವ ಸ್ಪರ್ಧೆ ಏರ್ಪಡಿಸಲಾಗಿದೆ‌. ರಾತ್ರಿ 8ಗಂಟೆಗೆ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಏ.18  ರಂದು ಬೆಳಿಗ್ಗೆ 8 ಗಂಟೆಯಿಂದ ಗ್ರಾಮದೇವಿಗೆ  ಉಡಿ ತುಂಬುವ ಕಾರ್ಯಕ್ರಮ, ರಾತ್ರಿ 8ಗಂಟೆಗೆ ವಿದ್ಯಾರ್ಥಿಗಳಿಂದ ಹಾಗೂ ಸ್ಥಳೀಯ ಕಲಾವಿದರಿಂದ ವಿವಿಧ ಕಾರ್ಯಕ್ರಮ ನಡೆಯಲಿವೆ.
ಏ.19 ರಂದು ಪುನರ್ವಸತಿ ಕೇಂದ್ರಗಳಿಂದ ಪಲ್ಲಕ್ಕಿ ಆಗಮನ ಹಾಗೂ ಪಲ್ಲಕ್ಕಿ ಉತ್ಸವ, ಸಾಯಂಕಾಲ 4ಗಂಟೆಗೆ  ಶ್ರೀ ಮಾರುತಿ ದೇವರ ರಥೋತ್ಸವ ಜರುಗಲಿದೆ. ಅದೇ ದಿನ ರಾತ್ರಿ 10ಗಂಟೆಗೆ ಬೈಲಹೊಂಗಲ ತಾಲೂಕಿನ ಆನಿಗೋಳದ ಶ್ರೀ ರಾಮಲಿಂಗೇಶ್ವರ ನಾಟ್ಯ ಸಂಘದಿಂದ ಶ್ರೀ ನಿಜಗುಣ ಶಿವಯೋಗಿ ಸಣ್ಣಾಟ ನಡೆಯಲಿದೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ನಾವಲಗಟ್ಟಿ ಗ್ರಾಮದ ಶ್ರೀ ಮಾರುತಿ ದೇವರ ಸದ್ಭಕ್ತ ಮಂಡಳಿ ಹಾಗೂ ಗ್ರಾಮಸ್ಥರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Total Views 110
RELATED ARTICLES

Most Popular

Recent Comments

KNN City News
Home
E-Paper