
ಬೆಳಗಾವಿ
ಅಕ್ಷರನಾದ ಕಲೆ ಸಾಹಿತ್ಯ, ಸಾಂಸ್ಕೃತಿಕ ವೇದಿಕೆಯಿಂದ ಮೈಸೂರು ಜಿಲ್ಲಾ ಸಾಹಿತ್ಯ ಪರಿಷತ್ತಿನಲ್ಲಿ ಇತ್ತೀಚಿಗೆ ಅಕ್ಷರ ನಾದದ ‘ಕವಿ ಕಾವ್ಯ ಕಥಾ ಸಂಗಮ-3’ ಕಾರ್ಯಕ್ರಮದಲ್ಲಿ ಬೆಳಗಾವಿಯ ರುದ್ರಾಂಬಿಕಾ ಮಹಾಂತೇಶ ಯಾಳಗಿ ಅವರಿಗೆ ಆದಿ ಕವಿ ಪಂಪ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ವೇದಿಕೆ ಅಧ್ಯಕ್ಷೆ ಡಾ. ಶೃತಿ ಮದುಸೂಧನ, ಚಿತ್ರ ನಟ ಶಶಿಕುಮಾರ್ ಆರಾಧ್ಯ, ಮದು ಸೂಧನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
