Monday, November 23, 2026
HomeBelagaviಬಾವಿಗೆ ಬಿದ್ದ ನಾಯಿ ರಕ್ಷಣೆ ಮಾಡಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು

ಬಾವಿಗೆ ಬಿದ್ದ ನಾಯಿ ರಕ್ಷಣೆ ಮಾಡಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು

ಬೆಳಗಾವಿ
ನೀರಿಲ್ಲದ ಬಾವಿಯಲ್ಲಿ ಬಿದ್ದಿದ್ದ ನಾಯಿ ಮರಿಯನ್ನು ಬೆಳಗಾವಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿ ಮಾನವೀಯತೆ ‌ಮೆರೆದ ಘಟನೆ ಗುರುವಾರ ಮಜಗಾವಿಯ ಮಹಾವೀರ ‌ನಗರದಲ್ಲಿ ನಡೆದಿದೆ.
ಸೂಪನ್ನವರ ಎಂಬುವರ ತೋಟದಲ್ಲಿದ್ದ ಹಾಳು ಬಾವಿಯಲ್ಲಿ ಬಿದ್ದಿದ್ದ ನಾಯಿ‌ ಮರಿ ರಕ್ಷಣೆ ಮಾಡುವಂತೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳಿಗೆ ಕರೆ ಮಾಡಿದರು. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬಾವಿಯಲ್ಲಿ ಬಿದ್ದಿದ್ದ ನಾಯಿಯನ್ನು ರಕ್ಷಣೆ ಮಾಡಿದ್ದಾರೆ.
ಕಿರಣ್ ಪಾಟೀಲ್, ಮಾರುತಿ ಪಾಟೀಲ್, ಅಲ್ಲಾಭಕ್ಷ, ಕೇದಾರಿ, ಬಾನಷು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Total Views 59
RELATED ARTICLES

Most Popular

Recent Comments

KNN City News
Home
E-Paper