Monday, November 23, 2026
HomeBelagaviನಮ್ಮ‌ ಸೊಸೆ ಕರ್ನಲ್ ಸುಫೀಯಾಗೆ ಜೋಳದ ರೊಟ್ಟಿ, ನಾಟಿಕೋಳಿ ಇಷ್ಟ: ಗೌಸ್

ನಮ್ಮ‌ ಸೊಸೆ ಕರ್ನಲ್ ಸುಫೀಯಾಗೆ ಜೋಳದ ರೊಟ್ಟಿ, ನಾಟಿಕೋಳಿ ಇಷ್ಟ: ಗೌಸ್

ಬೆಳಗಾವಿ
ಪಾಕಿಸ್ತಾನದ ಮೇಲೆ ದಾಳಿ ನಡೆಸಿದ ಆಪರೇಷನ್ ಸಿಂಧೂರ್ ದ ಬಗ್ಗೆ ನಮ್ಮ ಸೊಸೆ ಕರ್ನಲ್ ಸುಫೀಯಾ ಕುರೇಶಿಗೆ ಜೋಳದ ರೊಟ್ಟಿ ಹಾಗೂ ನಾಟಿ ಕೋಳಿ ತುಂಬಾ ಇಷ್ಟ. ಅವರ ಧೀರತದನ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಕರ್ನಲ್ ಸುಫಿಯಾ ಮಾವ ಗೌಸ್ ಬಾಗೇವಾಡಿ ಹೇಳಿದರು.
ಗುರುವಾರ ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊಣ್ಣೂರ ಗ್ರಾಮಕ್ಕೆ ಸೊಸೆ ಮತ್ತು ಮಗ ಬರುತ್ತಾರೆ. ಇಲ್ಲಿ ಬಂದಾಗ ಅರಾಮಾಗಿ ಇರುತ್ತಾರೆ. ನನ್ನ ಸೊಸೆಗೆ ಜವಾರಿ ರೊಟ್ಟಿ, ಕೋಳಿ ಬಹಳ ಹಿಡಿಸುತ್ತದೆ. ನಿಮ್ಮ ಊರು ಚೆನ್ನಾಗಿದೆ ಅಂತಾ ಸೊಸೆ ಹೇಳುತ್ತಿರುತ್ತಾರೆ. ನಮ್ಮ ಆರೋಗ್ಯದ ಬಗ್ಗೆಯೂ ಸೊಸೆ ಕಾಳಜಿ ಮಾಡುತ್ತಿರುತ್ತಾರೆ. ರಂಜಾನ್ ಹಬ್ಬಕ್ಕೆ ಬರಬೇಕಿತ್ತು. ಬರಲಿಲ್ಲ. ಬಕ್ರೀದ್ ಹಬ್ಬಕ್ಕೆ ಬರುತ್ತಾರೆ ಎಂದರು.


ಆಪರೇಷನ್ ಸಿಂಧೂರ್ ಬಗ್ಗೆ ಪ್ರಪಂಚಕ್ಕೆ ಮಾಹಿತಿ ಕೊಟ್ಟ ನಮ್ಮ ಸೊಸೆಯ ದೈರ್ಯ ಇದೆಲ್ಲಾ ನೋಡಿದ ಕೂಡಲೇ ಮನಸ್ಸಿನಲ್ಲಿ ಹೆಮ್ಮೆ ಬಂತು.ನಮ್ಮ ಊರು ಕರ್ನಾಟಕದ ಬಗ್ಗೆ ಗೌರವ ಬಂತು. ನಮ್ಮ ಮಕ್ಕಳು ಇಂದು ಹೆಮ್ಮೆ ಗಳಿಸಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು.
ಕಳೆದ 2015ರಲ್ಲಿ ಗುಜರಾತ್ ಬಡೋದರಾದಲ್ಲಿ ಮದುವೆ ಮಾಡಿದ್ದೇವು. ನನ್ನ ಮಗ ಹಾಗೂ ಸೊಸೆ ಒಂದೇ ಕಡೆ ಕೆಲಸ ಮಾಡಿದ್ದರು. ಅಲ್ಲಿ ಪರಿಚಯ ಆಗಿತ್ತು ಇಬ್ಬರ ನಡುವೆ. ಬಳಿಕ ಅವರ ಮನೆಯವರ ಒಪ್ಪಿಗೆ ಪಡೆದು ಮದುವೆಯಾದರು ಎಂದರು.


ನಿನ್ನೆ ನಡೆದ ಘಟನೆ ಬಗ್ಗೆ ಸೊಸೆ ಜೊತೆಗೆ ಮಾತಾಡಿಲ್ಲ.ಮಗನ ಜೊತೆಗೆ ಮಾತಾಡಿದೆ ಅವನೇ ಎಲ್ಲಾ ಹೇಳಿದ. ನಮಗೆ ನಿನ್ನೆ ನಿದ್ದೆ ಹತ್ತಿಲ್ಲ ಒಂದು ರೀತಿ ಹಬ್ಬದ ರೀತಿಯಾಗಿದೆ ನಮಗೆ. ಭಯೋತ್ಪಾದಕರಂಥ ಮೂರ್ಖರು ಯಾರು ಇಲ್ಲ. ಧರ್ಮ ನೋಡಿ ಹೊಡೆಯುವ ಕೆಲಸ ಅವರು ಮಾಡಿದರು. ನನ್ನ ಮಗ ಮರಡಿಮಠ ಗ್ರಾಮದಲ್ಲಿ ಕನ್ನಡ ಮೀಡಿಯಂ ನಲ್ಲಿ ಓದಿ ಬಳಿಕ ಆತ ಕಷ್ಟಪಟ್ಟು ಓದಿ ಕರ್ನಲ್ ಆಗಿದ್ದಾನೆ ಎಂದರು‌‌.

Total Views 429
RELATED ARTICLES

Most Popular

Recent Comments

KNN City News
Home
E-Paper