
ಬೆಳಗಾವಿ
ಬೆಳಗಾವಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಗುರುವಾರ ಧಾರಕಾರವಾಗಿ ಬಂದ ಹಿನ್ನೆಲೆಯಲ್ಲಿ ಇಲ್ಲಿನ ಶಹಾಪುರದಲ್ಲಿನ ಸ್ಮಶಾನದ ಮೇಲ್ಟಾವಣಿ ಹಾರಿ ಹೋಗಿದೆ. ಬೆಳಗ್ಗೆಯಿಂದ ಬೆಳಗಾವಿಯಲ್ಲಿ ಜಿಟಿ ಜಿಟಿಯಾಗಿ ಬರುತ್ತಿದ್ದ ಮಳೆ ಸಂಜೆಯಾಗುತ್ತಿದ್ದಂತೆ ಧಾರಾಕಾರವಾಗಿ ಸುರಿಯಲು ಆರಂಭಿಸಿತ್ತು. ಇದರ ಪರಿಣಾಮ ಸ್ಮಶಾನದ ಮೇಲ್ಟಾವಣಿ ಹಾರಿ ಹೋಯಿತು.
