
ಬೆಳಗಾವಿ
ಪಶ್ಚಿಮ ಘಟ ಪ್ರದೇಶದ ಅರಣ್ಯ ಉಳಿಸಲು ಎಲ್ಲರೂ ಒಂದಾಗಬೇಕು. ಖಾನಾಪುರದಲ್ಲಿ ಉಗಮ ಹೊಂದಿರುವ ಮಹದಾಯಿ ನದಿ ಯೋಜನೆಯಿಂದ ಪರಿಸರಕ್ಕೆ ಹಾನಿ ಇದೆ ಎಂದು ಕ್ಯಾಪ್ಟನ್ ನಿತಿನ್ ದೋಂಡ್ ಹೇಳಿದರು.
ಮಂಗಳವಾರ ಬೆಳಗಾವಿ ಮರಾಠಾ ಮಂಗಲ ಕಾರ್ಯಾಲಯದಲ್ಲಿ ನಮ್ಮ ನೀರು ನಮ್ಮ ಹಕ್ಕು ಹೋರಾಟದ ಸಭೆಯಲ್ಲಿ ಮಾತನಾಡಿದರು.
1,500 ಕಿಮೀ ವರೆಗೂ ಮಲಪ್ರಭಾ ನದಿ ಹರಿಯುತ್ತದೆ. ಅದರಂತೆ ಅಘನಾಶಿ, ಕಳಸಾ ಬಂಡೂರಿ, ಮಹದಾಯಿ ನದಿ ನೀರು ನಿರಂತರವಾಗಿ ಹರಿದು ಸಮುದ್ರ ಸೇರುತ್ತದೆ. ಇದು ಸಹಜ ಪ್ರಕ್ರಿಯೆ. ನಿರಂತರವಾಗಿ ನದಿ ನೀರು ಸಮುದ್ರಕ್ಕೆ ಸೇರುವುದರಿಂದ ಯಾವುದೇ ಹಾನಿ ಇಲ್ಲ. ನದಿ ಹರಿದು ಸಮುದ್ರಕ್ಕೆ ಸೇರುವ ಮುನ್ನ ಕಾಡಿನಲ್ಲಿರುವ ಪ್ರಾಣಿ, ಒಣಗಿಂದ ಮರಗಳಿಗೆ ನೀರು ಹಾಕಿಕೊಂಡು ಹೋಗುತ್ತದೆ ಎಂದರು.
ಕಾರ್ಬನ್ ಡೈಆಕ್ಸೈಡ್ ಉತ್ಪತಿಯಾಗುತ್ತಿದೆ. ಅರಣ್ಯ ಪ್ರದೇಶಗಳಲ್ಲಿ ಪಾಚಿಗಟ್ಟಿರುವುದು ನದಿಯ ನೀರಿನಿಂದ ಕಾರ್ಬನ್ ಡೈಆಕ್ಸೈಡ್ ಶುಚಿಮಾಡುತ್ತದೆ ಎಂದರು.
ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಅನುಷ್ಠಾನವಾದರೆ ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶ ಹಾನಿಯಾಗುತ್ತದೆ. ಅಲ್ಲದೆ ಉತ್ತರ ಕರ್ನಾಟಕ ಮಳೆ ಇಲ್ಲದೆ ಮರಳುಗಾಡು ಆಗುತ್ತದೆ ಎಂದರು.
ಪರಿಸರವಾದಿ ದಿಲೀಪ್ ಕಾಮತ ಮಾತನಾಡಿ, ನದಿಗಳು ನಿರಂತರವಾಗಿ ಹರಿಯುತ್ತಿರಬೇಕು. ಖಾನಾಪುರ ಅರಣ್ಯ ಪ್ರದೇಶದಲ್ಲಿ ಸಾವಿರಾರು ಮರಗಳನ್ನು ಕಡೆದು ಮಹದಾಯಿ ಯೋಜನೆ ಅನಿಷ್ಠಾನ ಮಾಡುವುದು ಬೇಡ ಎಂದರು.
ಪಶ್ಚಿಮ ಘಟ ಪ್ರದೇಶಗಳನ್ನು ಉಳಿಸುವ ನಿಟ್ಟಿನಲ್ಲಿ ಪರಿಸರವಾದಿಗಳು ಹೋರಾಟ ನಡೆಸಿದ್ದಾರೆ. ಖಾನಾಪುರ ಅರಣ್ಯ ಪ್ರದೇಶದಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶ ಇದೆ. 2041ರ ವರೆಗೂ ಧಾರವಾಡ ಜಿಲ್ಲೆಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೂ ಮಹದಾಯಿ ಯೋಜನೆ ಅನುಷ್ಠಾನ ಮಾಡುವುದು ಏಕೆ ಎಂದು ಪ್ರಶ್ನಿಸಿದರು.
ರೈತರು ಪರಿಸರವಾದಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಆದರೆ ಈಗ ಅವರು ಜಾಗೃತರಾಗಿದ್ದಾರೆ. ರಾಜಕಾರಣಿಗಳ ಕಾರ್ಖಾನೆಗಳಿಗೆ ಲಾಭಗೊಸ್ಕರ ಮಾಡುತ್ತಿದ್ದಾರೆ. ಇದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದರು.
ಪಶ್ಚಿಮ ಘಟ್ಟಗಳ ಅರಣ್ಯಗಳನ್ನು ಉಳಿಸಿಕೊಳ್ಳಬೇಕು. ಸರಕಾರ ಅನುಮತಿ ಪಡೆದಿದ್ದೇವೆ. ಗೋವಾ ಮಹಾರಾಷ್ಟ್ರ ಸರಕಾರ ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಸರಕಾರದ ವಾದ ಇದೆ. ಆದರೆ ಅರಣ್ಯ ಇಲಾಖೆ ಅನುಮತಿ ಕೊಡುತ್ತಿಲ್ಲ ಏಕೆ ಎಂದರೆ ಮಹದಾಯಿ ಯೋಜನೆ ಅನುಷ್ಠಾನವಾದರೆ ಸಾವಿರಾರು ಎಕರೆ ಅರಣ್ಯ ಪ್ರದೇಶ ಹಾನಿಯಾಗುತ್ತದೆ. ವನ್ಯಜೀವಿ ಪ್ರಾಣಿಗಳ ಸಂತತಿ ನಾಶವಾಗುತ್ತದೆ. ಈ ನಿಟ್ಟಿನಲ್ಲಿ ಮಹದಾಯಿ ಉಳಿವಿಗಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ ಎಂದರು.
ಮಹದಾಯಿ, ಕಳಸಾ ಬಂಡೂರಿ ಯೋಜನೆ ಅನುಷ್ಠಾನಗೊಂಡರೆ ಬೆಳಗಾವಿಗೆ ಒಂದು ಹನಿ ನೀರು ಸಿಗುವುದಿಲ್ಲ. ಇದನ್ನು ಸ್ವತಃ ಬೆಳಗಾವಿ ಜಿಲ್ಲಾಧಿಕಾರಿಯೇ ಹೇಳಿದ್ದಾರೆ ಎಂದರು.
ಈಗ ಹಿಡಕಲ್ ಡ್ಯಾಮ್ ನೀರನ್ನು ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಕೊಂಡೊಯ್ಯಲು ಪೈಪ್ ಲೈನ್ ಕಾಮಗಾರಿ ಆರಂಭಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಜನರಿಗೆ ನೀರು ಇಲ್ಲ. ಆದರೆ ಕೈಗಾರಿಕಾ ಪ್ರದೇಶಕ್ಕೆ ನೀರು ತೆಗೆದುಕೊಂಡು ಹೋಗುತ್ತಿರುವುದಕ್ಕೆ ನಮ್ಮ ವಿರೋಧ ಇದೆ ಎಂದರು.
ಈಗಾಗಲೇ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ನವಿಲು ತೀರ್ಥ ಜಲಾಶಯದಿಂದ ಧಾರವಾಡಕ್ಕೆ ನೀರು ಕೊಡಲಾಗುತ್ತಿದೆ. ಈಗ ಹಿಡಕಲ್ ಜಲಾಶಯದ ನೀರು ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಕೊಂಡೊಯ್ಯಲು ಕಾಮಗಾರಿ ಮಾಡಿ ಬೆಳಗಾವಿ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದರು.
ಸಾಮಾಜಿಕ ಕಾರ್ಯಕರ್ತ ಸುಜೀತ ಮುಳಗುಂದ, ರೈತ ಮುಖಂಡರಾದ ಚುನ್ನಪ್ಪ ಪೂಜಾರಿ, ಮಲ್ಲೇಶ ಚೌಗುಲೆ, ನಿತಿನ್ ಬೊಳಬಂದಿ, ಸಿದ್ದಗೌಡ ಮೋದಗಿ, ಮಲ್ಲೇಶ ಚೌಗುಲೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
