
ಬೆಳಗಾವಿ
ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಮಸೀದಿಯಲ್ಲಿನ ಕುರಾನ್ ಪುಸ್ತಕ ಕಳ್ಳತನ ಮಾಡಿ ಸುಟ್ಟ ಪ್ರಕರಣದ ತನಿಖೆ ಎಲ್ಲಿಗೆ ಬಂತು. ಈ ಹಿಂದೆ ಮುಸ್ಲಿಮ್ ಸಮುದಾಯ 8 ದಿನಗಳ ಕಾಲ ಗಡವು ನೀಡಿತ್ತು. ಈಗೇಕೆ ಪ್ರತಿಭಟಿಸುತ್ತಿಲ್ಲ ಎನ್ನುವ ನಾನಾ ಅನುಮಾನ ಜನರಲ್ಲಿ ಕಾಡುತ್ತಿದೆ.
ಸಂತಿಬಸ್ತವಾಡ ಗ್ರಾಮದಲ್ಲಿ ಲವ್ ಜೀಹಾದ್ ನಡೆದಿತ್ತು. ಮಸೀದಿಯಲ್ಲಿ ಹಿಂದುಗಳು ಹೋಗಲು ಸಾಧ್ಯವಿಲ್ಲ. ಆದರೆ ಇದರ ಹಿಂದಿನ ಆಪರೇಷನ್ ರಹಷ್ಯದ ಬಗ್ಗೆ ಕೆಲ ದಿನಗಳ ಬಳಿಕ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸಿ ಸಂಪೂರ್ಣ ತನಿಖೆಗೆ ಒತ್ತಾಯಿಸಿದ್ದರು.
ಈಗ ಬಂದಿರುವ ಪ್ರಶ್ನೆ ಮೂರು ದಿನದಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ಹೇಳಿದ್ದ ಪೊಲೀಸರಿಗೆ ಸಮಯ ನೀಡಿದ್ದ ಮುಸ್ಲಿಮ್ ಸಮುದಾಯ ಮೂರು ದಿನಗಳ ಬಳಿಕ ಕಳೆದ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಕುರಾನ್ ಸುಟ್ಟ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಇದರಲ್ಲಿ ಮುಸ್ಲಿಮ್ ಸಮಾಜದ ಮುಖಂಡರು ಪೊಲೀಸ್ ಇಲಾಖೆಗೆ 8 ದಿನಗಳ ಕಾಲ ಗಡವು ನೀಡಿದ್ದರು. ಗಡುವು ಮುಗಿದರೂ ಯಾಕೆ ಪ್ರತಿಭಟನೆ ನಡೆಸುತ್ತಿಲ್ಲ ಮುಸ್ಲಿಮ್ ಸಮಾಜದವರು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
