
ಬೆಳಗಾವಿ
ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಮಸೀದಿಯಲ್ಲಿನ ಕುರಾನ್ ಸುಟ್ಟ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಪ್ರಭಾವಿ ರಾಜಕಾರಣಿಗಳ ವೈಯಕ್ತಿಕ ಅಕ್ರಮ ಚಟುವಟಿಕೆಗಳನ್ನು ಮುಚ್ಚಿ ಹಾಕಲು ಪೊಲೀಸರು ಹುನ್ನಾರ ನಡೆಸಿದ್ದಾರೆ ಎನ್ನುವ ಅನುಮಾನ ಸಂತಿಬಸ್ತವಾಡ ಗ್ರಾಮಸ್ಥರಲ್ಲಿ ಸಂಶಯ ವ್ಯಕ್ತಪಡಿಸುವಂತಾಗಿದೆ.
ಹೌದು. ಪ್ರಭಾವಿ ರಾಷ್ಟ್ರೀಯ ಪಕ್ಷಗಳ ರಾಜಕೀಯ ನಾಯಕರ ಅಕ್ರಮ ಚಟುವಟಿಕೆಯನ್ನು ಮರೆ ಮಾಚುವ ಉದ್ದೇಶದಿಂದ ಕುರಾನ್ ಸುಟ್ಟ ಆರೋಪಿಗಳನ್ನು ಬಂಧಿಸುವ ಬದಲು ಗ್ರಾಮೀಣ ಪೊಲೀಸರು ಹಿಂದಿನ ಪ್ರಕರಣದಲ್ಲಿ ಮಸೀದಿ ಗೋಪುರ ಧ್ವಂಸಗೊಳಿಸಿದವರನ್ನು ಬಂಧಿಸಿ ಪ್ರಕರಣದ ದಿಕ್ಕು ತಪ್ಪಿಸುವ ಹುನ್ನಾರ ನಡೆಸಿದ್ದಾರೆ ಎನ್ನುವ ಅನುಮಾನ ಸಂತಿಬಸ್ತವಾಡ ಗ್ರಾಮಸ್ಥರಲ್ಲಿ ಮೂಡಿದೆ.
ಪರಸ್ಪರ ಪ್ರೀತಿಸಿ ಮದುವೆಯಾದ ಅನ್ಯಕೋಮಿನ ಯುವಕ, ಯುವತಿ ಸಂಬಂಧ ಇತ್ತು. ಅವರು ಇಬ್ಬರು ಒಪ್ಪಿಗೆಯ ಮೇರೆಗೆ ಪ್ರೀತಿ ಮಾಡುತ್ತಿದ್ದರು. ಆದರೆ ಯುತಿಯ ಸಮುದಾಯದವರು ಅದರ ಬಗ್ಗೆ ವಿರೋಧ ವ್ಯಕ್ತ ಪಡಿಸಿದಾಗ ಆ ಯುವತಿ ಅನ್ಯಕೋಮಿನ ಯುವಕನೊಂದಿಗೆ ಹೋಗುವುದಾಗಿ ಹೇಳಿದ್ದಳು ಎಂದು ತಿಳಿದು ಬಂದಿದೆ. ಇದಕ್ಕೂ ಮುನ್ನ ಪ್ರಭಾವಿ ರಾಷ್ಟ್ರೀಯ ಪಕ್ಷದ ನಾಯಕರು ಮೊದಲು ಒಮ್ಮತದ ಮೇರೆಗೆ ಅಕ್ರಮ ಚಟುವಟಿಕೆ ಅಂದರೆ ಜುಗಾರ್ ನಡೆಸುತ್ತಿದ್ದರು. ಅವರ ನಡುವೆ ವೈಮನಸ್ಸು ಆದ ಮೇಲೆ ಇಬ್ಬರು ರಾಷ್ಟ್ರೀಯ ನಾಯಕರ ಬೆಂಬಲಿಗರ ನಡುವೆ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಅವರಿಬ್ಬರು ವೈಯಕ್ತಿಕ ಜುಗಾರ್ ಅಡ್ಡ ಮಾಡಿರುವುದರಿಂದ ಇಂಥ ಘಟನೆಗಳು ನಡೆಯುತ್ತಿವೆ ಎನ್ನುವ ಆರೋಪ ಸಂತಿಬಸ್ತವಾಡ ಗ್ರಾಮಸ್ಥರು ಮಾಡಿದ್ದಾರೆ.
ಮಸೀದಿಯ ಈಗ್ಗಾ ಗೋಪುರದ ಮೇಲೆ ಧ್ವಂಸ ಮಾಡಿದವರು ಬಂಧನವಾದ ಪ್ರಕರಣದಲ್ಲಿ ಬಂಧವಾಗಿರುವವರು ಕುರಾನ್ ಸುಟ್ಟಿಲ್ಲ ಎಂದು ಪೊಲೀಸ್ ತನಿಖೆಯ ವೇಳೆ ಬಹಿರಂಗ ಪಡಿಸಿದ್ದಾರೆ. ಆದರೆ ಇದರ ಹಿಂದಿನ ಸತ್ಯಾಸತ್ಯೆ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
ಪ್ರಭಾವಿ ರಾಷ್ಟ್ರೀಯ ಪಕ್ಷಗಳ ನಾಯಕರ ಬೆಂಬಲಿಗರ ಅಕ್ರಮ ಚಟುವಟಿಕೆಯಿಂದ ಶಾಂತಿ ಸೌಹಾರ್ದತೆಯಿಂದ ಸಂತಿಬಸ್ತವಾಡದಲ್ಲಿ ವಿಕೋಪಕ್ಕೆ ತಿರುವು ಪಡೆದ ಪ್ರಕರಣದ ಬಗ್ಗೆ ನಗರ ಪೊಲೀಸರು ತನಿಖೆ ಮಾಡಿ ಪತ್ತೆ ಮಾಡಬೇಕಿದೆ ಎನ್ನುವುದು ಎಲ್ಲರ ಒತ್ತಾಯವಾಗಿದೆ.
ಅಲ್ಲದೆ ರಾಷ್ಟ್ರೀಯ ಪಕ್ಷಗಳ ಪ್ರಭಾವಿ ರಾಜಕಾರಣಿಗಳ ಬೆಂಬಲಿಗರ ನಡೆಸುವ ಅಂದರ್ ಬಾಹರ್ ( ಜಗಾರ್) ನಡೆಸುವವರ ವಿಚಾರಣೆ ನಡೆಸಿದರೆ ಈ ಪ್ರಕರಣಕ್ಕೆ ಸ್ಪಷ್ಟ ನಿಲುವು ಸಿಗಲಿದೆ ಎನ್ನುವುದು ಸಂತಿಬಸ್ತವಾಡ ಗ್ರಾಮಸ್ಥರ ಒತ್ತಾಯವಾಗಿದೆ.
