Monday, November 23, 2026
HomeBelagaviಕಾರ್ ಜಖಂಗೊಳಿಸಿದ್ದ ಆನೆ ಪ್ರತ್ಯೇಕ್ಷ: ಗ್ರಾಮಸ್ಥರಲ್ಲಿ ಆತಂಕ

ಕಾರ್ ಜಖಂಗೊಳಿಸಿದ್ದ ಆನೆ ಪ್ರತ್ಯೇಕ್ಷ: ಗ್ರಾಮಸ್ಥರಲ್ಲಿ ಆತಂಕ

ಬೆಳಗಾವಿ
ಬೆಳಗಾವಿ ತಾಲೂಕಿನ ಉಚಗಾವಿಯಲ್ಲಿ ಕಾರ್ ಜಖಂಗೊಳಿಸಿದ್ದ ಆನೆ ಮತ್ತೆ ಪ್ರತ್ಯೇಕ್ಷಗೊಂಡು ಜನರಲ್ಲಿ ಆತಂಕ ಸೃಷ್ಟಿಸಿದೆ.
ಕಳೆದೊಂದು ವಾರದ ಹಿಂದೆ ಉಚಗಾವಿಯ ಜಮೀನಿನಲ್ಲಿ ನಿಲ್ಲಿಸಿದ್ದ ಕಾರ್ ಮೇಲೆ ದಾಳಿ ಮಾಡಿದ್ದ ಕಾಡಾನೆ ಇಂದು ಅದೇ ಗ್ರಾಮದಲ್ಲಿ ಪ್ರತ್ಯೇಕ್ಷವಾಗಿದ್ದು ಜನರಲ್ಲಿ ಆತಂಕ ಸೃಷ್ಟಿ ಮಾಡುವಂತೆ ಮಾಡಿದೆ. ಹಲವಾರು ಬಾರಿ ಇಲ್ಲಿನ ಗ್ರಾಮಸ್ಥರು ಆನೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಅದನ್ನು ಹಿಡಿಯುವಲ್ಲಿ ವಿಫಲರಾಗಿದ್ದಾರೆ. ಕೂಡಲೇ ಅದನ್ನು ಸೆರೆ ಹಿಡಿಯಬೇಕೆಂದು ಉಚಗಾವಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸದ್ಯ ಉಚಗಾವಿಗೆ ಬಂದಿರುವ ಕಾಡಾನೆ ಸಿನೋಳ್ಳಿಯ ಕಡೆಗೆ ಹೋಗಿರುವ ಶಂಕೆ ಇದ್ದು ತಕ್ಷಣ ಅದನ್ನು ಸೆರೆ ಹಿಡಿಯಬೇಕು ಎನ್ನುವುದು ಜನರ ಆಗ್ರಹವಾಗಿದೆ.

Total Views 81
RELATED ARTICLES

Most Popular

Recent Comments

KNN City News
Home
E-Paper