
ಬೆಳಗಾವಿ
ಕಳೆದ ಎರಡು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ಹಲವು ಕಾಯಿಲೆಗಳಿಂದ ಬಳಲುತ್ತಿದ್ದ 70 ವರ್ಷದ ವೃದ್ಧನೋರ್ವನಿಗೆ ಕೊವಿಡ್ ಪಾಸಿಟಿವ್ ನಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿ ಮೃತಪಟ್ಟಿದ್ದಾನೆ ಎಂದು ಬಿಮ್ಸ್ ಸರ್ಜನ್ ವಿಠ್ಠಲ ಶಿಂಧೆ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ನಿನ್ನೆ 70ವರ್ಷದ ವ್ಯಕ್ತಿ ನಮ್ಮಲ್ಲಿ ಬಂದು ದಾಖಲಾಗಿದ್ದ.ಆ ವ್ಯಕ್ತಿ ಎರಡು ದಿನದ ಹಿಂದೆ ಕೆಎಲ್ಇ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಉಸಿರಾಟದ ಸಮಸ್ಯೆ ಸೇರಿದಂತೆ ಹಲವು ಕಾಯಿಲೆ ಇದ್ದವು. ಈ ಕಾರಣಕ್ಕೆ ಕೊವಿಡ್ ರ್ಯಾಟ್ ಟೆಸ್ಟ್ ಮಾಡಿದ್ದರು. ಈ ವೇಳೆ ಕೊವಿಡ್ ಪಾಸಿಟಿವ್ ಕೂಡ ಬಂದಿತ್ತು ಎಂದರು.
ಬಳಿಕ ರೋಗಿಯನ್ನ ನಮ್ಮ ಆಸ್ಪತ್ರೆಗೆ ಶಿಪ್ಟ್ ಮಾಡಿದ್ದರು. ಚಿಕಿತ್ಸೆ ನೀಡಿದರೂ ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಅವರ ಸ್ವ್ಯಾಬ್ ಕೂಡ ತೆಗೆದುಕೊಂಡಿದ್ದು ಹುಬ್ಬಳ್ಳಿಗೆ ಕಳುಹಿಸುತ್ತೇವೆ. ಸಾವಿನ ಬಳಿಕ ಕೊವಿಡ್ ನಿಯಮಾವಳಿ ಪ್ರಕಾರ ಅಂತ್ಯಸಂಸ್ಕಾರ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದ್ದೇವೆ.
ಮಾಸ್ಕ್ ಹಾಕುವುದು ಸೇರಿದಂತೆ ಕೊವಿಡ್ ಕೇಸ್ ಗಳ ಮೇಲೆ ನಿಗಾ ಇಟ್ಟಿದ್ದೇವೆ ಎಂದರು.
