Monday, November 23, 2026
HomeBelagaviಎಪಿಎಂಸಿ ಪೊಲೀಸರ ಮಿಂಚಿನ ಕಾರ್ಯಾಚರಣೆ

ಎಪಿಎಂಸಿ ಪೊಲೀಸರ ಮಿಂಚಿನ ಕಾರ್ಯಾಚರಣೆ

ಬೆಳಗಾವಿ
ಖಾಸಗಿ ಆಸ್ಪತ್ರೆಯ ಹಿಂಬದಿ ಸೇರಿದಂತೆ ನಗರದ ವಿವಿಧೆಡೆ ನಿಲ್ಲಿಸಿದ ಸುಮಾರು 2 ಲಕ್ಷ 65 ಸಾವಿರ ಮೌಲ್ಯದ 9 ಬೈಕ್ ಕಳ್ಳತನ ಮಾಡಿದ್ದ ಆರೋಪಿಯನ್ನು ಎಪಿಎಂಸಿ ಪೊಲೀಸರು ಹೆಡೆಮುರಿ ಕಟ್ಟಿ ಬೈಕ್ ಸೀಜ್ ಮಾಡಿದ ಘಟನೆ ಗುರುವಾರ ನಡೆದಿದೆ.
ಮೂಲತಃ ಗೋಕಾಕ ತಾಲೂಕಿನ ಬಣಗಾರಗಲ್ಲಿಯ ಪ್ರಸಕ್ತ ನ್ಯೂ ವೈಭವ ನಗರದಲ್ಲಿರುವ ಸಂತೋಷ ಅದಾನಿ (45) ಬಂಧಿತ ಆರೋಪಿ. ಬಂಧಿತನಿಂದ 2 ಸ್ಟೆಂಡರ್ ಬೈಕ್, 3 ಆ್ಯಕ್ಟಿವಾ ಹೊಂಡಾ, 1 ಸಿಬಿಜೆಡ್ ಎಕ್ಸ್‌ಟೀಮ್. 1 ಬಜಾಜ ಪಲ್ಸರ, 1 ಹಿರೋ ಪ್ಯಾಶನ ಪ್ರೋ ಹಾಗೂ 1 ಬಜಾಜ್ ಸಿಟಿ-100 ಬೈಕ್‌ಗಳನ್ನು ಸೀಜ್ ಮಾಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬ್ ಬೊರಸೆ ಮಾರ್ಗದರ್ಶನದಲ್ಲಿ‌ ಎಪಿಎಂಸಿ ಪೊಲೀಸ್ ಠಾಣೆಯ ಸಿಪಿಐ ಯು.ಎಸ್.ಅವಟಿ, ಪಿಎಸ್ಐ ಎಸ್.ಆರ್ ಮುತ್ತತ್ತಿ, ಎಎಸ್ಐ ಎಮ್. ಎ. ಪಾಟೀಲ, ದೀಪಕ ಸಾಗರ, ಬಸವರಾಜ ನರಗುಂದ, ಖಾದರಸಾಬ ಖಾನಮ್ಮನವರ, ರಮೇಶ. ಅಕ್ಕಿ, ಮಹಾದೇವ ಖಶೀದ ಸೀಜ್ ಮಾಡಿದ್ದಾರೆ.

Total Views 198
RELATED ARTICLES

Most Popular

Recent Comments

KNN City News
Home
E-Paper