Monday, November 23, 2026
HomeBelagaviರಾಜ್ಯ ಸರಕಾರ ಕೊಲ್ಯಾಪ್ಸ್ ಆಗಿದೆ, ಸಿಎಂ ರಾಜೀನಾಮೆ ಕೊಡುವುದು ಒಳ್ಳೆಯದು: ಶೆಟ್ಟರ್

ರಾಜ್ಯ ಸರಕಾರ ಕೊಲ್ಯಾಪ್ಸ್ ಆಗಿದೆ, ಸಿಎಂ ರಾಜೀನಾಮೆ ಕೊಡುವುದು ಒಳ್ಳೆಯದು: ಶೆಟ್ಟರ್

ಬೆಳಗಾವಿ
ರಾಜ್ಯ ಸರಕಾರ ಕೊಲ್ಯಾಪ್ಸ್ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಹೋಗುವುದು ಸೂಕ್ತ ಎಂದು ಮಾಜಿ ಸಿಎಂ, ಸಂಸದ ಜಗದೀಶ್ ‌ಶೆಟ್ಟರ್ ಹೇಳಿದರು.
ಶನಿವಾರ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯ ಸರಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಕಲಬುರ್ಗಿ ಕಾಂಗ್ರೆಸ್ ‌ಶಾಸಕ ಬಿ.ಆರ್. ಪಾಟೀಲ್ ಅವರು ರಾಜೀವ್ ಗಾಂಧಿ ವಸತಿ ಯೋಜನೆಯ ಮನೆ ಹಂಚಿಕೆಯಲ್ಲಿ ‌ಕೋಟ್ಯಂತರ ರೂ. ಭ್ರಷ್ಟಾಚಾರ ‌ನಡೆದಿದೆ ಎಂದು ಆಡಿಯೋ ವೈರಲ್ ಆಗಿದೆ. ಈ ಹಿಂದೆ ರಾಯರೆಡ್ಡಿ ದೊಡ್ಡ ಭ್ರಷ್ಟಾಚಾರ ಇದೆ ಎಂದು ಹೇಳಿದ್ದರು. ಆದರೆ ಈಗ ಬಿ. ಆರ್ . ಪಾಟೀಲ್ ಜಮೀರ್ ಪಿಎ ಜೊತೆಗೆ ಮಾತನಾಡಿದ ಆಡಿಯೋ ಬಂದಿದೆ. ಶಿಫಾರಸ್ಸು ಮಾಡಿದವರನ್ನು ಬಿಟ್ಟು ಹಣ ಕೊಟ್ಟವರಿಗೆ ಮನೆ ಹಂಚಿಕೆ ಆಗಿದೆ ಎಂದಿದ್ದಾರೆ ಎಂದರು.
ಹಣ ಕೊಟ್ಟರೇ ಎಲ್ಲಾ ಕೆಲಸ ಆಗುತ್ತದೆ ಎನ್ನುವುದು ಗೊತ್ತಾಗುತ್ತದೆ. ಬಿಜೆಪಿ ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಿದ್ದೇವು. ಈ ಸರಕಾರದ ಭ್ರಷ್ಟಾಚಾರ ಈಗ ಖಚಿಯವಾಗಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ತಹಶಿಲ್ದಾರ ಕಚೇರಿಗೆ ಭೇಟಿ ಕೊಟ್ಟಿದ್ದಾರೆ.
ಹಣ ಕೊಟ್ಟವರ ಕೆಲಸ ಬೇಗ ಆಗುತ್ತೆ ಎಂದು ಸಾರ್ವಜನಿಕರ ದೂರು ನೀಡಿದ್ದಾರೆ. ತಹಶಿಲ್ದಾರ ಕಚೇರಿ ಈ ಕೆಲಸಕ್ಕೆ ಇಷ್ಟು ಹಣ ಎಂದು ಬೋರ್ಡ್ ಹಾಕಿ. ಸ್ವತಃ ಕಂದಾಯ ಸಚಿವರೇ ಇದನ್ನು ಹೇಳಿದ್ದಾರೆ. ಸಚಿವ ಕೃಷ್ಣಬೈರೇಗೌಡ , ಬಿ ಆರ್ ಪಾಟೀಲ್ ಹೇಳಿಕೆ ನೋಡಿದರೆ ಸರಕಾರದಲ್ಲಿ ಭ್ರಷ್ಟಾಚಾರ ತುಂಬಿದೆ.ಸಿದ್ದರಾಮಯ್ಯ ಆಡಳಿತದಲ್ಲಿ ಹಿಡತ ಕಳೆದುಕೊಂಡಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಆದಷ್ಟು ಬೇಗ ರಾಜೀನಾಮೆ ಕೊಟ್ಟು ಹೋಗುವುದು ಒಳ್ಳೆಯದು ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿ ವಿಚಾರಕ್ಕೆ ಉತ್ತರಿಸಿ ಷಾ ಭೇಟಿ ರಾಜಕೀಯ ಚರ್ಚೆ ನಡೆದಿಲ್ಲ. ಗೊಂದಲ ನಿವಾರಣೆ ಆಗಿದೆ.ಇನ್ನೂ ಸಣ್ಣ ಪುಟ್ಟ ವಿಚಾರ ಇತ್ಯರ್ಥ ಆಗಲಿವೆ ಎಂದರು.

Total Views 59
RELATED ARTICLES

Most Popular

Recent Comments

KNN City News
Home
E-Paper