
ಬೆಳಗಾವಿ
ಮನೆ ಬೀಗ ಒಡೆದು ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಗೋಕಾಕ್ ತಾಲೂಕಿನ ಬಸವನಗರದಲ್ಲಿ ಶನಿವಾರ ನಡೆದಿದೆ.
ಮನೆಗೆ ಬೀಗ ಹಾಕಿ ಬೇರೆ ಊರಿಗೆ ಹೋಗಿದ್ದ ಸುಧಾಕರ್ ಚಿಂಚಲಿ ಎಂಬುವವರ ಮನೆಗೆ ಕನ್ನ ಹಾಕಿದ್ದಾರೆ. ಸಂಬಂಧಿಕರ ಮನೆ ಸಮಾರಂಭಕ್ಕೆ ಹೋಗಿದ್ದ ಸುಧಾಕರ್ ಮತ್ತು ಕುಟುಂಬ ಮನೆಯಲ್ಲಿ 120 ಗ್ರಾಂ ಚಿನ್ನ, 120ಗ್ರಾಂ ಬೆಳ್ಳಿ, 50 ಸಾವಿರ ರೂ. ಇಟ್ಟಿದ್ದರು ಅದನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಸುಧಾಕರ್ ಮನೆ ಪಕ್ಕದ ಮತ್ತೊಂದು ಮನೆ ಬೀಗ ಒಡೆದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಮದುವೆ ಸಮಾರಂಭ ಮುಗಿಸಿ ಸುಧಾಕರ್ ಕುಟುಂಬ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಗೋಕಾಕ್ ಶಹರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಗೋಕಾಕ್ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
