
ಬೆಳಗಾವಿ
ಶಾಸಕ ಬಿ.ಆರ್. ಪಾಟೀಲ್ ಭ್ರಷ್ಟಾಚಾರ ಆಡಿಯೋ ವೈರಲ್ ಆಗಿದ್ದು, ರಾಜಕೀಯದಲ್ಲಿ ಸತ್ಯನೂ ಮಾತನಾಡಬಾರದು ಎಂದರೆ ಕಷ್ಟವಾಗುತ್ತದೆ.ಅವರು ಏನು ಮಾತನಾಡಿದ್ದಾರೆ ಎನ್ನುವುದು ಅವರಿಗೆ ಬಿಟ್ಟಿದ್ದು ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.
ಶನಿವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಅದಕ್ಕೆ ಸ್ಪಷ್ಟಿಕರಣ ಸಂಬಂಧಿಸಿದ ಇಲಾಖೆಯ ಮಂತ್ರಿ ಈಗಾಗಲೇ ಕೊಟ್ಟಿದ್ದಾರೆ. ಬಿಜೆಪಿ ರಾಜೀನಾಮೆ ಕೇಳುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಸಚಿವರು ಸಮರ್ಥವಾಗಿ ಉತ್ತರ ಕೊಟ್ಟಿದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೆಪಿಸಿಸಿ ಅಧ್ಯಕ್ಷರು ಮುಂದುವರೆಯುತ್ತಾರೆ, ಸಿಎಂ ಮುಂದುವರೆಯುತ್ತಾರೆ. ಆಗೋದಿದ್ರೆ ಆಗಬಹುದು. ತಪ್ಪೇನಿದೆ. ಅದು ಹೈಕಮಾಂಡ್ ತೀರ್ಮಾನ ಮಾಡಬೇಕು. ಈ ಕುರಿತು ಆಂತರಿಕವಾಗಿ ಚರ್ಚೆ ಇಲ್ಲ. ಮೀಡಿಯಾದಲ್ಲಿ ಮಾತ್ರ ಚರ್ಚೆಯಾಗ್ತಿದೆ. ನಾವು ಮಾತ್ರ ಆ ರೇಸ್ ನಲ್ಲಿ ಇಲ್ಲ. ಅದರ ಪರನೂ ಇಲ್ಲ. ವಿರೋಧನೂ ಇಲ್ಲ ಎಂದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಅವರೇ ಸ್ಪಷ್ಟಣೆ ಕೊಟ್ಟಿದ್ದಾರೆ. ಅವರು ಯಾರಬೇಕಾದ್ರನ್ನೂ ಮುಂದುವರೆಸಬಹುದು, ಬಿಡಬಹದು ಎಂದರು.
ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ರೈತರ ಸಹಕಾರದಿಂದ ಬೆಳೆಯುತ್ತಿದೆ. ಈ ಸಂಸ್ಥೆಯಿಂದ ಕಳೆದ ಎರಡೂ ವರ್ಷದಿಂದ ಹೊಸ ಹೊಸ ತಳಿಯ ಕಬ್ಬುಗಳನ್ನು ಸಂಶೋಧನೆ ಮಾಡಿ ರೈತರಿಗೆ ಕೊಟ್ಟಿದ್ದೇವೆ. ಕರ್ನಾಟಕದಲ್ಲಿ ಸಕ್ಕರೆ ಮತ್ತು ಎಥನಾಲ್ ಎರಡೂ ಉತ್ಪಾದನೆ ಹೆಚ್ಚಾಗುತ್ತಿದೆ. ದೇಶದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ ಎಂದರು.
ಈ ವರ್ಷ ಉತ್ತಮ ಮಳೆಯಾಗಿರುವುದರಿಂದ 6 ಲಕ್ಷ ಹೆಕ್ಟೇರ್ ಕಬ್ಬು ಬೆಳೆಯಬಹುದಾಗಿದೆ. ಮುಂದಿನ ವರ್ಷದಲ್ಲಿ ಪ್ರತಿಯೊಂದು ಸಕ್ಕರೆ ಕಾರ್ಖಾನೆಯಲ್ಲಿ ನೀರಿನ ಕೊರತೆ ಇರುವುದರಿಂದ 150 ದಿನ ಮಾತ್ರ ಕಬ್ಬು ನುರಿಸಲು ಸೂಚಿಸಿದ್ದೇವೆ ಎಂದರು.
ಕೇಂದ್ರ ಸರಕಾರ ಸಕ್ಕರೆಯನ್ನು ನಿರಿಯಾತ್ ಮಾಡಲು ಅನುಮತಿ ನೀಡಬೇಕು. ಎಕ್ಸಪೋರ್ಟ್ ಮಾಡಿದರೆ ಉತ್ತಮ ಬೆಳೆ ಬರಲು ಸಾಧ್ಯ. ಇದರಿಂದ ಸಕ್ಕರೆ ಕಾರ್ಖಾನೆಗಳು ಉಳಿಯಲು ಸಾಧ್ಯ. ಇದನ್ನು ಕೇಂದ್ರ ಸರಕಾರ ಮಾಡಬೇಕು ಎಂದರು.
ರಾಜ್ಯದಲ್ಲಿ ರೈತರು ಟೊಮ್ಯಾಟೊ, ತೊಗರಿ, ಈರುಳ್ಳಿ ಬೆಳೆಗಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕೇಂದ್ರ ಸರಕಾರ ನಿರಿಯಾತ್ ಮಾಡಲೇ ಬೇಕು ಎಂದ ಶಿವಾನಂದ ಪಾಟೀಲ್ ಆಗ್ರಹಿಸಿದರು.
