
ಬೆಳಗಾವಿ
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಗಾಗಿ ಮತ್ತೆ ಹೋರಾಟ ಆರಂಭ ಮಾಡುತ್ತೇವೆ. ಜೂ. 23ರಂದು ಸೋಮವಾರ ಉಳವಿಯಲ್ಲಿ ರಾಜ್ಯ ಮಟ್ಟದ ಸಂಕಲ್ಪ ಸಭೆ ಆಯೋಜನೆ ಮಾಡಲಾಗಿದೆ ಎಂದು ಕೂಡಲಸಂಗದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜೂ. 24ರಂದು ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡಿ ಮುಂದಿನ ಹೋರಾಟ ಹೇಗೆ ಮಾಡಬೇಕು, ಜನರನ್ನ ಒಗ್ಗೂಡಿಸುವುದು ಹೇಗೆ ಎಂಬುದರ ಕುರಿತು ಚರ್ಚೆ ಮಾಡುತ್ತೇವೆ. ಎರಡನೇ ಬಾರಿಗೆ ಮತ್ತೆ ಸಂಕಲ್ಪ ಮಾಡಿ ಹೋರಾಟ ಆರಂಭ ಮಾಡುತ್ತೇವೆ. ಎಲ್ಲಿಂದ ಹೋರಾಟ ಶುರು ಮಾಡಬೇಕು ಅನ್ನೋದು ಕೂಡ ಚರ್ಚೆಯಾಗುತ್ತದೆ. ಮೀಸಲಾತಿ ಆದೇಶ ಪತ್ರ ಸಿಗುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದರು.
ಅಧಿವೇಶನದಲ್ಲಿ ನಮ್ಮ ಹೋರಾಟದ ಬಗ್ಗೆ ಸಿಎಂ ಅವಹೇಳನ ಮಾಡಿದರು. ಇದರಿಂದ ನಮಗೆ ಬಹಳ ನೋವಾಗಿದೆ ಇದರಿಂದ ಜನರ ಬಳಿ ಹೋಗ್ತಿದ್ದೇವೆ. ಸ್ವಾರ್ಥಕ್ಕೋಸ್ಕರ ಸಮಾಜದ ಜನರನ್ನ ಬಳಕೆ ಮಾಡಿಕೊಂಡು. ಅಧಿಕಾರ ಇದ್ದಾಗ ಒಂದು ಇಲ್ಲದಾಗ ಒಂದು ಮಾಡ್ತಿದ್ದಾರೆ. ಅಂತವರ ಮೇಲೆ ನಂಬಿಕೆ ಇಟ್ಟುಕೊಳ್ಳದೇ ಜನ ಸಾಮಾನ್ಯರ ಮೇಲೆ ನಂಬಿಕೆ ಇಟ್ಟು ಹೋರಾಟ ಮಾಡಿದ್ದೇವೆ ಎಂದು ಪರೋಕ್ಷವಾಗಿ ತಮ್ಮ ಸಮಾಜದ ಸಚಿವರು, ಶಾಸಕರ ವಿರುದ್ಧ ಅಸಮಾಧಾನ ಹೊರ ಹಾಕಿದರು.
