Monday, November 23, 2026

ರೈತರಿಗೆ ಬೆಳೆದ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವ ಹಕ್ಕು ರೈತರಿ ಇರಬೇಕು . ಎಚ್ ಕೆ ಪಾಟೀಲ್

ಕನ್ನಡಮ್ಮ ಸುದ್ದಿ ಕುಕನೂರ: ತಾಲೂಕಿನ ಶಿರೂರು ಗ್ರಾಮದಲ್ಲಿ ದಿ ಕೆಎಚ್ ಪಾಟೀಲರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಕಾನೂನು ಮತ್ತು ಸಂಸದೀಯ ಮಂತ್ರಿಗಳಾದ ಎಚ್ ಕೆ ಪಾಟೀಲರು ಮಾತನಾಡಿ, ನಮ್ಮ ತಂದೆಯವರಾದ ದಿವಂಗತ ಕೆ ಹೆಚ್ ಪಾಟೀಲರು ಯಾವಾಗಲೂ ಒಂದು ಮಾತು ಹೇಳುತ್ತಿದ್ದರು, ರೈತರು ತಾವು ಬೆಳೆದ ಬೆಳೆಗಳಿಗೆ ಮತ್ತು ಉತ್ಪಾದನೆಗಳಿಗೆ ಬೆಲೆ ನಿಗದಿ ಮಾಡುವ ಹಕ್ಕು ಇರಬೇಕು ಎಂದು ಮಾತನಾಡಿದರು.

ಯಲಬುರ್ಗಾ ತಾಲೂಕಿನ ಗಡಿ ಗ್ರಾಮವಾದ ಯಾರೇಹಂಚಿನಾಳ ಗ್ರಾಮಕ್ಕೆ ನಾನು ಸುಮಾರು ವರ್ಷಗಳ ಹಿಂದೆ ಬೆಣ್ಣಿ ಹಳ್ಳ ಕಾರ್ಯಕ್ರಮಕ್ಕೆ ಬಂದಾಗ ಅಲ್ಲಿನ ಬಡತನ ನೋಡಿ ಜೀವ ಚುರು ಎಂದಿತ್ತು, ಇವತ್ತು ಅಂತ ಪರಿಸ್ಥಿತಿ ಇಲ್ಲ, ಇಲ್ಲಿನ ಶಾಸಕರಾದ ಬಸವರಾಜ್ ಅಭಿವೃದ್ಧಿ ಕಾರ್ಯಗಳಿಂದ ಬಡತನ ತೊಲಗಿದೆ..

ಸುಮಾರು ವರ್ಷಗಳ ಹಿಂದೆ ಯಲಬುರ್ಗಾ ತಾಲೂಕಿನ ಜನರು ಎಲ್ಲಾ ಕೆಲಸಕ್ಕೆ ಗದಗನ್ನು ಅವಲಂಬಿಸಿ ಜೀವನ ಮಾಡುತ್ತಿದ್ದರು, ಶಿಕ್ಷಣಕ್ಕೆ, ಆರೋಗ್ಯ, ಹಾಸ್ಪಿಟಲ್ ಗೆ, ಎಪಿಎಂಸಿಗೆ ಗದಗಿಗೆ ಬರುತ್ತಿದ್ದರು ಆದರೆ ಇಂದು ಯಲಬುರ್ಗಾ ತಾಲೂಕು ಅಭಿವೃದ್ಧಿ ಹೊಂದಿ ಹೆಜ್ಜೆಗೂ ಹೆಜ್ಜಿಗೂ ಕಾಲೇಜು, ರೆಸಿಡೆನ್ಸಿ ಸ್ಕೂಲ್ ಗಳು ರಾಯರೆಡ್ಡಿ ಅವರ ಪರಶ್ರಮದಿಂದ ಎಲ್ಲವೂ ಸಾಧ್ಯವಾಗಿವೆ ಎಂಥ ಶಾಸಕರನ್ನು ಶಾಶ್ವತವಾಗಿ ಉಳಿಸಿಕೊಳ್ಳಿ ಎಂದು ಮಾತನಾಡಿದರು.

 

ರಾಜ್ಯ ಸರ್ಕಾರದ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಮಾತನಾಡಿ, ದಿವಂಗತ ಕೆಎಚ್ ಪಾಟೀಲರಮೂರ್ತಿ ಪ್ರತಿಷ್ಠಾಪನೆ ಕಾರ್ಯ ಮೆಚ್ಚುವಂಥದ್ದು ನಾನು ಕೆ ಎಸ್ ಪಾಟೀಲರ್ ಗರಡಿಯಲ್ಲಿ ಬೆಳೆದವನು ಮೊದಲ ಸಲ ಆಯ್ಕೆಯಾಗಿ ವಿಧಾನಸಭೆಗೆ ಹೋದ ಸಂದರ್ಭದಲ್ಲಿ ಶಾಸಕರನ್ನು ಕೆಎಚ್ ಪಾಟೀಲರು ಪ್ರೀತಿಯಿಂದ ಮಾತನಾಡಿಸಿ ಯಾವ ರೀತಿ ಜನಪ್ರತಿನಿಧಿ ಯಾವ ರೀತಿ ನಡೆದುಕೊಳ್ಳಬೇಕು ಹೇಳುತ್ತಿದ್ದರು ಈ ದಿನಮಾನಗಳೇ ಅಂತ ದುರದೃಷ್ಟಿ ನಾಯಕರ ವಿರಳ, ಕೆಎಚ್ ಪಾಟೀಲ್ ಅವತ್ತೆ ರಾಜ್ಯದ ಮುಖ್ಯಮಂತ್ರಿಗಳಾಗಬೇಕಾಗಿತ್ತು ಆದರೆ ಕಾರಣಾಂತರಗಳಿಂದ ಅದು ಕೈಗೂಡಲಿಲ್ಲ ನಿರಾಸೆ ವ್ಯಕ್ತಪಡಿಸಿದರು. ಇಂತಹ ಮಹನೀಯರ ಮೂರ್ತಿ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಆತ್ಮ ತೃಪ್ತಿ ಅನಿಸುತ್ತದೆ ಎಂದು ಕೆಎಚ್ ಪಾಟೀಲರ ಒಡನಾಟ ವೇದಿಕೆಯಲ್ಲಿ ಸ್ಮರಿಸುತ್ತ ಮೂರ್ತಿ ಪ್ರತಿಷ್ಠಾಪನೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.

 

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರದ ಬಸವರಾಜ್ ರಾಯರೆಡ್ಡಿ ಮಾತನಾಡಿ, ಹಿರೇಹಳ್ಳ ಯೋಜನೆ ಮುಳುಗಡೆ ಗ್ರಾಮಗಳಾದ ಶಿರೂರು, ಅರಿಕೇರಿ, ವೀರಾಪುರ ಹಾಗೂ ಮುತ್ತಾಳ ಗ್ರಾಮಗಳ ಗ್ರಾಮಗಳು ಯಾವತ್ತು ಇವು ಕಾನೂನಿನ ಪ್ರಕಾರ ಮುಳುಗಡೆ ಗ್ರಾಮಗಳಲ್ಲ, ಮಳೆ ಹೆಚ್ಚಾದ ಸಮಯದಲ್ಲಿ ನೀರು ಗ್ರಾಮಗಳಿಗೆ ಬರುತ್ತಿತ್ತು ಇದರಿಂದ ಜನರಿಗೆ ತೊಂದರೆ ಆಗುತ್ತಿತ್ತು. ಇದು ಕಾನೂನ ಪ್ರಕಾರ ಅವಕಾಶವಿಲ್ಲದ ಮುಳುಗಡೆ ಗ್ರಾಮಗಳ ಆಗಿದ್ದವು, ನಾನು ಬೇರೆ ಬೇರೆ ವಿಷಯ ಅಧ್ಯಯನ ಮಾಡಿ ಶೀತ ಪೀಡಿತ ಗ್ರಾಮಗಳೆಂದು ಘೋಷಿಸಿ ಆಗಿನ ಸಮಯದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಎಚ್ ಕೆ ಪಾಟೀಲ್ ಅವರಿಗೆ ಮನವರಿಕೆ ಮಾಡಿ ಕೊಟ್ಟು ಈ ನಾಲ್ಕು ಗ್ರಾಮಗಳಿಗೆ ಪ್ರವಾಹ ಪರಿಸ್ಥಿತಿಯಿಂದ ಗ್ರಾಮಗಳನ್ನ ಯತ್ತಂಗಡಿ ಮಾಡಿ ಅವರಿಗೆ ಪರಿಹಾರ ನೀಡಿ ಎಂದು ಹೊಸ ಗ್ರಾಮಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದೇನೆ ಈ ಕಾರ್ಯದಲ್ಲಿ ದಿವಂಗತ ಕೆಎಚ್ ಪಾಟೀಲರು ಮತ್ತು ಅವರ ಸುಪುತ್ರರಾದ ಎಚ್ ಕೆ ಪಾಟೀಲರ ಸಹಕಾರ ದೊಡ್ಡದು ಅ ಸಾಕಾರಕ್ಕಾಗಿ ನಿಮಿತ್ಯವಾಗಿ ಇಂದು ಎಚ್ ಎ ಕೆ ಪಾಟೀಲ್ ಅವರಿಗೆ ಅಭಿನಂದನೆ ಸಲ್ಲಿಸಲವಾಗಿ ಅವರ ತಂದೆಯವರಾದ ದಿವಂಗತ ಕೆ ಎಚ್ ಪಾಟೀಲ್ ಅವರು ಮೂರ್ತಿ ಪ್ರತಿಷ್ಠಾಪನೆ ಮಾಡಿ ಯಲಬುರ್ಗಾ ತಾಲೂಕಿನ ಜನತೆಯ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಆಡಳಿತ ಸುಧಾರಣೆ ಅಧ್ಯಕ್ಷರಾದ ಆರ್ ವಿ ದೇಶಪಾಂಡೆ, ಸಣ್ಣ ನೀರಾವರಿ ಸಚಿವರಾದ ಎನ್ ಎಸ್ ಬೋಸರಾಜ್, ಹಿಂದುಳಿದ ವರ್ಗ ಇಲಾಖೆ ಸಚಿವರಾದ ಶಿವರಾಜ್ ತಂಗಡಿಗಿ, ಸಂಸದರಾದ ರಾಜಶೇಖರ್ ಹಿಟ್ನಾಳ, ಜಿಲ್ಲಾಧಿಕಾರಿಗಳಾದ ಸುರೇಶ್ ಇಟ್ನಾಳ, ಜಿಲ್ಲೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣತ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಾದ ರಾಮ್ ಎಲ್ ಅರಸಿದ್ದಿ, ಸಿಂಟಾಲೂರ್ ನೀರಾವರಿ ಕಾರ್ಯನಿರ್ವಾಹಕ ಅಭಿಯಂತರದ ಪ್ರಕಾಶ್ , ಸಹಾಯಕ ಅಭಿಯಂತರದ ರಾಘವೇಂದ್ರ ಜೋಶಿ, ಕುಕನೂರ್ ಠಾಣೆಯ ಅಧಿಕಾರಿಗಳಾದ ಗುರುರಾಜ್ ಟಿ, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಸಂಗಮೇಶ್ ಗುತ್ತಿ,

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹನುಮಂತಗೌಡ ಪಾಟೀಲ್, ಮಂಜುನಾಥ್ ಯಡಿಯಾಪುರ, ಹೊನ್ನಪ್ಪ ಮರಡಿ, ರಾಘವೇಂದ್ರ ಕಾತರಕಿ, ಈಶಪ್ಪ ದೊಡ್ಮನಿ, ಶರಣಪ್ಪ ಗಾಂಜಿ, ಗ್ಯಾರಂಟಿ ಸಮಿತಿ ತಾಲೂಕು ಸದಸ್ಯರಾದ ಸಂತೋಷ್ ಮೆಣಸಿನ ಕಾಯಿ ಶಿವಕುಮಾರ್ ಕಲ್ಮನಿ ಇತರರಿದ್ದರು.

Total Views 78
RELATED ARTICLES

Most Popular

Recent Comments

KNN City News
Home
E-Paper