Monday, November 23, 2026
ಕುಕನೂರ ಬಂದ್‌: ಜನರಿಲ್ಲದೆ ಬಿಕೋ ಎನ್ನುತ್ತಿರುವ ಬಸ್ ನಿಲ್ದಾಣ.
ಕನ್ನಡಮ್ಮ ಸುದ್ದಿ ಕುಕನೂರ
ಕುಕನೂರ: ಬಂದ್‌ ಗೆ ಕುಕನೂರು ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಎಸ್ ಆರ್ ಟಿಸಿ ಬಸ್‌ ನಿಲ್ದಾಣ, ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿವೆ.
 ಕುಕುನೂರು ಪಟ್ಟಣದಲ್ಲಿ  ವಿವಿಧ ಸಂಘಟನೆಗಳಿಂದ  ಸರ್ಕಾರ ಉದ್ದೇಶ  ಜಾಗದಲ್ಲಿ ಸರ್ಕಾರಿ ಆಡಳಿತ ಸೌಧ, ಕೋರ್ಟ್, ಬುದ್ಧ ಬಸವ ಅಂಬೇಡ್ಕರ್ ಸಮುದಾಯ ಭವನ ಸರ್ಕಾರ ಉದ್ದೇಶಿತ ಜಾಗದಲ್ಲಿ ಆಗಬೇಕೆಂದು ಬಂದಗೆ ಪಟ್ಟಣದ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ್ದು  ಕಂಡು ಬಂತು.
ಕೆಎಸ್‌ ಆರ್ ಟಿಸಿ ಬಸ್ ನಿಲ್ದಾಣದಲ್ಲಿ   ಬಸ್ಸುಗಳು ಇಲ್ಲದೆ ಸಾರ್ವಜನಿಕರು ತಮ್ಮ ಸ್ವಂತ ಬೈಕ್ ಗಳನ್ನು  ಆಶ್ರಯಿಸಿ  ಡ್ಯೂಟಿಗೆ ಮತ್ತು ಊರಿಗೋ ದೃಶ್ಯ ಸಾಮಾನ್ಯವಾಗಿ ಕಂಡು ಬಂತು,  ಬಂದರುವುದರಿಂದ ಕೆಎಸ್ಆರ್ಟಿಸಿ ಬಸ್ ಗಳು   ರಸ್ತೆಗಿಳಿದಿಲ್ಲ.
ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ವೀರಭದ್ರಪ್ಪ ಸರ್ಕಲ್ ಜನರ ಓಡಾಟ ಕಡಿಮೆ ಇತ್ತು. ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಮಾಲೀಕರು ಸಹ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
Total Views 192
RELATED ARTICLES

Most Popular

Recent Comments

KNN City News
Home
E-Paper