Monday, November 23, 2026
HomeBelagaviಎರಡು ಕಾಡಾನೆಗಳು ದಾರುಣ ಸಾವು: ಗಣಪತಿ ಮೇಲೆ ಕೇಸ್ ದಾಖಲು

ಎರಡು ಕಾಡಾನೆಗಳು ದಾರುಣ ಸಾವು: ಗಣಪತಿ ಮೇಲೆ ಕೇಸ್ ದಾಖಲು

ಬೆಳಗಾವಿ
ಖಾನಾಪುರ ತಾಲೂಕಿನ ಸುಳೆಗಾಳಿ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಕಾಡಾನೆಗಳ ದಾರುಣವಾಗಿ ಮೃತಪಟ್ಟ ‌ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನು ಮಾಲೀಕ ಗಣಪತಿ ಸಾತೇರಿ ಮೇಲೆ  ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.
ಇಂದು ಮೃತಪಟ್ಟ ಎರಡು ಆನೆಗಳ ಮರಣೋತ್ತರ ಪರೀಕ್ಷೆ ನಡೆಯಲಿದೆ. ನಿನ್ನೆ ಆನೆಗಳು ರೈತರ ಜಮೀನಿನಲ್ಲಿ ಹಾದು ಹೋಗುತ್ತಿ ವೇಳೆ ಘಟನೆ ನಡೆದಿದ್ದು, ಬೇಕಾಬಿಟ್ಟಿಯಾಗಿ ರೈತ ಗಣಪತಿ ವಿದ್ಯುತ್ ತಂತಿ ಕಟ್ ಮಾಡಿದ್ದಕ್ಕೆ ಆನೆಗಳು ಮೃತಪಟ್ಟಿವೆ.ಆನೆ ಸೇರಿ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಹಾಕಿದ್ದ ತಂತಿ ಸ್ಪರ್ಶಿಸಿ ಆನೆಗಳು ಮೃತಪಟ್ಟಿವೆ. ಭಾನುವಾರ ಮಧ್ಯಾಹ್ನದ ಸಮಯದಲ್ಲಿ ಆನೆಗಳು ಮೃತಪಟ್ಟಿವೆ. ಬೇಕಾಬಿಟ್ಟಿಯಾಗಿ ವಿದ್ಯುತ್ ತೆಗೆದುಕೊಂಡು ಜಮೀನಿಗೆ ಅಳವಡಿಸಿದ್ದ ಜಮೀನು ಮಾಲೀಕ ಗಣಪತಿ ಸಾತೇರಿ ಗುರವ್ ಮೇಲೆ ಎಫ್ಐಆರ್ ದಾಖಲಾಗಿದ್ದು, ಆನೆಗಳ ಸಾವಿನ ಬಗ್ಗೆ ಅರಣ್ಯಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ‌ ಆನೆಗಳ ಸಾವಿನ ವಿಚಾರ ಗೊತ್ತಾಗುತ್ತಿದ್ದಂತೆ ಗಣಪತಿ ಪರಾರಿಯಾಗಿದ್ದು ಸ್ಥಳದಲ್ಲೆ‌‌ ಮೊಕಾಂ ಹೂಡಿರುವ ಆರ್‌ಎಫ್‌ಓ ಶಿವಾನಂದ ತಂಡ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಹಿನ್ನೆಲೆ ಅವರಿಗೂ ನೋಟೀಸ್ ನೀಡಲಾಗಿದೆ. ಬೆಳಗ್ಗೆ 9ಗಂಟೆಗೆ ಘಟನೆ ನಡೆದ ಸ್ಥಳದಿಂದ ಬೇರೊಂದು ಸ್ಥಳಕ್ಕೆ ಮೃತ ಆನೆಗಳ‌ ಸ್ಥಳಾಂತರ ಮಾಡಿ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನೆರವೇರಿಸಲಿರುವ ಅರಣ್ಯ ಇಲಾಖೆ ಸಿದ್ಧತೆ ‌ಮಾಡಿಕೊಂಡಿದೆ.

Total Views 195
RELATED ARTICLES

Most Popular

Recent Comments

KNN City News
Home
E-Paper