Monday, November 23, 2026
HomeBelagaviಸರಕಾರದ ವಿರುದ್ಧ ಹೊಸ ಬಾಂಬ್ ಸಿಡಿಸಿದ ರಾಜೀವ್

ಸರಕಾರದ ವಿರುದ್ಧ ಹೊಸ ಬಾಂಬ್ ಸಿಡಿಸಿದ ರಾಜೀವ್

ಬೆಳಗಾವಿ
ರಾಜ್ಯ ಸರಕಾರದಲ್ಲಿ ದುಡ್ಡು ಕೊಟ್ಟವರಿಗೆ ಮಾತ್ರ ಮನೆ ಮಂಜೂರು ಮಾಡಲಾಗುತ್ತಿದೆ ಎಂದು ಆಳಂದ ಶಾಸಕ ಬಿ. ಆರ್. ಪಾಟೀಲ್ ಆಡಿಯೋ ವೈರಲ್ ಆದ ಹಿನ್ನೆಲೆ ರಾಜ್ಯ ಸರಕಾರದ ವಿರುದ್ಧ ಮತ್ತೊಂದು ಗಂಭೀರ ಆರೋಪವನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಮಾಡಿದ್ದಾರೆ.
ರಾಯಬಾಗ ಹಾಗೂ ಕುಡುಚಿ ಮತಕ್ಷೇತ್ರದಲ್ಲಿ ರಾಜ್ಯ ಸರ್ಕಾರದಿಂದ ಒಂದು ಸಹ ಮನೆ ಮಂಜೂರೂ ಆಗಿಲ್ಲ. ದುಡ್ಡು ಕೊಟ್ಟರೆ ಮಾತ್ರ ಮನೆ ಮಂಜೂರು ಮಾಡುತ್ತೇವೆ ಎಂದು ಮಂಜೂರಾತಿಗಳನ್ನ ತಡೆ ಹಿಡಿದಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಕೆಂದ್ರ ಸರಕಾರದಿಂದ ಮಾತ್ರ ಮನೆಗಳು ಮಂಜೂರಾತಿ ಆಗಿವೆ. ಬಿಜೆಪಿ ಅವಧಿಯಲ್ಲಿ ಕಟ್ಟಿದ ಮನೆಗಳಿಗೆ ಪೂರ್ಣ ಹಂತದ ಹಣವನ್ನ ಬಿಡುಗಡೆ ಮಾಡುತ್ತಿಲ್ಲ. ಬಡವರ ಬಳಿ ಹಣ ಕಿತ್ತುಕೊಳ್ಳುವ ನೀಚ ಮಟ್ಟಕ್ಕೆ ಕಾಂಗ್ರೆಸ್ ಸರಕಾರ ಇಳಿದಿದೆ. ಸರಕಾತ ಬಡವರ ಹತ್ರ ಲಂಚ ಕೇಳುವುದನ್ನು ವಿರೋಧಿ ಇಂದು ಪ್ರತಿಭಟನೆ ಆಯೋಜನೆ ಮಾಡಲಾಗಿದೆ ಎಂದರು.
ಎಲ್ಲಾ ಬಡವರಿಗೂ ಮನೆ ಮಂಜೂರಾತಿಗೆ ಒತ್ತಾಯಿಸಿ ಇಂದು ರ್ಯಾಲಿ ಆಯೋಜನೆ ಮಾಡಲಾಗಿದೆ. ಇಂದು ರಾಯಬಾಗದಲ್ಲಿ ಬಿಜೆಪಿಯಿಂದ ರಾಜ್ಯ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

Total Views 162
RELATED ARTICLES

Most Popular

Recent Comments

KNN City News
Home
E-Paper