
ಬೆಳಗಾವಿ
ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯುವ ಅವಶ್ಯಕತೆ ಇಲ್ಲ. ಭ್ರಷ್ಟಾಚಾರ ಬಿಟ್ಟು ಕಾಂಗ್ರೆಸ್ ಇಲ್ಲ ಕಾಂಗ್ರೆಸ್ ಬಿಟ್ಟು ಭ್ರಷ್ಟಾಚಾರ ಇಲ್ಲ ಎಂದು ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ.ರವಿ ಹೇಳಿದರು.
ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಇದು ಖಾಸಗಿ ವಿಷಯ ಅಲ್ಲಾ. ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿ. ಇದಕ್ಕಿಂತ ಮೊದಲು ಜಮೀರ್ ಅಹಮ್ಮದ್ ಅವರ ರಾಜೀನಾಮೆ ತೆಗೆದುಕೊಳ್ಳಿ. ಗ್ಯಾರಂಟಿ ಕೊಟ್ಟಿದ್ದೇವೆ ಅಂದ್ರೇ ಭ್ರಷ್ಟಾಚಾರಕ್ಕೆ ಲೈಸೆನ್ಸ್ ಅಲ್ಲಾ. ನೀವು ಇಲಾಖೆಗಳಲ್ಲಿ ರೇಟ್ ಕಾರ್ಡ್ ಹಾಕಿ ಎಂದರು.
ರಾಜು ಕಾಗೆ ಬಿಜೆಪಿ ಶಾಸಕ ಅಲ್ಲಾ. ಸರ್ಕಾರದಲ್ಲಿ ಒಂದು ಪೈಸೆ ಕೆಲಸ ಆಗ್ತಿಲ್ಲ ಅಂತಾ ಹೇಳಿದ್ದಾರೆ. ಸರ್ಕಾರ ಬಂದ ಮೇಲೆ ಬೆಲೆ ಏರಿಕೆ ಮಾಡಿದ್ದೇ ದೊಡ್ಡ ಕೆಲಸ. ವರ್ಕ್ ಆರ್ಡರ್ ಇಷ್ಯು ಆಗ್ತಿಲ್ಲ.
ರಾಜು ಕಾಗೆ ಇರೋ ಸತ್ಯ ಹೇಳಿದ್ದಾರೆ ಎಂದರು.
ನಿಮಗೆ ಇನ್ನೂ ಮೂರು ವರ್ಷ ಇದೆ ಅವಲೋಕನ ಮಾಡಿಕೊಳ್ಳಿ. ಆಡಳಿತ ಪಕ್ಷದವರು ಮಾತಾಡ್ತಿದ್ದಾರೆ ಅಂದ್ರೇ ಮುಖ್ಯಮಂತ್ರಿ ಪೂರ್ವಾಗ್ರಹವಾಗಿ ಮಾತಾಡ್ತಿದ್ದಾರೆ ಅಂತಿದ್ರೂ ಈಗ ಹಾಗೇ ಅನ್ನೋಕೆ ಬರಲ್ಲ ಎಂದು ಚಾಟಿ ಬಿಸಿದರು.
