Monday, November 23, 2026
HomeBelagaviಮೈಸೂರು ಗುರುಕುಲದ ಹೆಮ್ಮೆಯ ಸಾಧಕ ಹುಕ್ಕೇರಿಶ: ಶ್ರೀ ಉಜ್ಜಯಿನಿ ಜಗದ್ಗುರುಗಳು

ಮೈಸೂರು ಗುರುಕುಲದ ಹೆಮ್ಮೆಯ ಸಾಧಕ ಹುಕ್ಕೇರಿಶ: ಶ್ರೀ ಉಜ್ಜಯಿನಿ ಜಗದ್ಗುರುಗಳು

ಮೈಸೂರು
ಮೈಸೂರು ಅರಮನೆ ಜಪ್ಪದಕಟ್ಟೆ ಮಠದ ಶ್ರೀ ಜಗದ್ಗುರು ಮರುಳಾರಾಧ್ಯ ಕೃಪಾಪೋಷಿತ ಗುರುಕುಲದ ಸಾಧಕರ ಸಮಾವೇಶ ಕಾರ್ಯಕ್ರಮದ ದಿವ್ಯ ಸಾನ್ನಿದ್ಯವನ್ನು ವಹಿಸಿಕೊಂಡು ಉಜ್ಜಯಿನಿ ಶ್ರೀ ಜಗದ್ಗುರು ಸಿದ್ದಲಿಂಗರಾಜ ದೇಶಿಕೇಂದ್ರ ಮಹಾಸ್ವಾಮಿಗಳವರು ಮಾತನಾಡಿ, ಮೈಸೂರು ಅರಮನೆ ಜಪ್ಪದಕಟ್ಟೆ ಗುರುಕುಲದಲ್ಲಿ ನೂರಾರು ಜನ ಗುರು ವರ್ಗದ ಮತ್ತು ವೀರಕ್ತಮಠದ ಸ್ವಾಮೀಜಿಗಳು ಅಧ್ಯನಗೈದಿದ್ದಾರೆ. ಅದರಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕೂಡ ಒಬ್ಬರು. ಮೈಸೂರು ಅರಮನೆ ಜಪ್ಪದಕಟ್ಟೆ ಮಠದಲ್ಲಿ ಓದಿ ಇವತ್ತು ಸಾವಿರಾರು ವಿದ್ಯಾರ್ಥಿಗಳಿಗೆ ಗುರುಕುಲ ಶಿಕ್ಷಣ ನೀಡಿ ವೈದಿಕ, ಜ್ಯೋತಿಷ್ಯ ಸೇರಿದಂತೆ ಪ್ರವಚನ ಪಾಠಶಾಲೆಯನ್ನು ಆರಂಭಿಸುವ ಮೂಲಕ ನಮ್ಮ ಗುರುಕುಲದ ಹೆಮ್ಮೆಯ ಸಾಧಕರಾಗಿ ಹೊರ ಹೊಮ್ಮಿದ್ದಾರೆ ಎಂದು ಜಗದ್ಗುರುಗಳು ಸಂತಸದಿಂದ ನುಡಿದರು.
ಅರಮನೆಯ ಜಪ್ಪದಕಟ್ಟೆ ಮಠದ ಶ್ರೀ ಡಾ.ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಮಾತನಾಡಿ, ನಮ್ಮ ಗುರುಕುಲದ ಬಗ್ಗೆ ನಮಗೆ ಹೆಮ್ಮೆ ಇದೆ. ಇಲ್ಲಿ ಬಹಳಷ್ಟು ಜನ ಅಧ್ಯಯನ ಮಾಡಿದ್ದಾರೆ. ಪ್ರತಿಷ್ಠಿತ ‌ಮಠಗಳಿಗೆ ಸ್ವಾಮೀಜಿಗಳಾಗಿದ್ದಾರೆ. ಅಷ್ಟೇ ಅಲ್ಲದೆ, ಪ್ರಸ್ತುತ ಉಜ್ಜಯಿನಿಯ ಜಗದ್ಗುರುಗಳು ಸಹ ಇಲ್ಲಿಯೇ ಅಧ್ಯಯನ ಮಾಡಿದ್ದಾರೆ ಎಂದು ಹೇಳಲು ಸಂತೋಷವಾಗುತ್ತದೆ. ಹಾಗೆಯೇ ಸಾಕಷ್ಟು ಜನ ಪುರೋಹಿತರು, ಅನೇಕ ಸಾಧಕರು ಇಲ್ಲಿ ಅಧ್ಯಯನ ಮಾಡಿದ್ದಾರೆ. ಅದರಲ್ಲಿ ನಮ್ಮ ಹುಕ್ಕೇರಿ ಶ್ರೀಗಳ ನಮ್ಮ ಗುರುಕುಲಕ್ಕೆ ಹೆಮ್ಮೆ ತಂದಿದ್ದಾರೆ ಎಂದರು.
ಸಾಧಕರ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು, ಉಜ್ಜಯಿನಿಯ ಲಿಂಗೈಕ್ಯ ಜಗದ್ಗುರು ಮರುಳಾರಾದ್ಯರ ಕನಸು ನಾವೆಲ್ಲ ನನಸು ಮಾಡಬೇಕಿದೆ. ಇವತ್ತು ಜಗದ್ಗುರುಗಳ ಆಶೀರ್ವಾದ ನಮ್ಮ ಮೇಲೆ ಇರುವುದರಿಂದಲೇ ಇಷ್ಟರ ಮಟ್ಟಿಗೆ ಬೆಳೆಯಲು ಸಾಧ್ಯ ಎಂದರು.
ಮೈಸೂರಿನ ಶಾಸಕ ಶ್ರೀವತ್ಸ ಅವರು ಗುರುಕುಲಕ್ಕೆ 25 ಲಕ್ಷ ರೂ. ದೇಣಿಗೆಯಾಗಿ ನೀಡುವುದನ್ನು‌ ಘೋಷಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಜ್ಞಾನಶಂಕರ ಪ್ರಾಸ್ತಾವಿಕವಾಗಿ ಮಾತನಾಡಿದರು.
ದೊಡವಾಡದ ಜಡೇಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳು, ಕರಜಗಿಯ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಮಮದಾಪೂರದ ಸಿದ್ಧಲಿಂಗ ದೇವರು, ಪಾಶ್ಚಾಪುರದ ವಿಶ್ವರಾದ್ಯ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಗುರುಕುಲದ ಮುಖ್ಯಸ್ಥ ಸಂಪತಕುಮಾರ ಶಾಸ್ತ್ರೀಗಳು, ತುರುಮರಿಯ ಡಾ. ಮಹಾಂತ ಶಾಸ್ತ್ರೀಗಳು, ಗುಡಗುಂಟಾ ಅಮರೇಶ್ವರದ ಗಂಗಾಧರ ಶಾಸ್ತ್ರೀಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾನ್ ಚಂದ್ರಶೇಖರ ಶಾಸ್ತ್ರೀಗಳು ಸೇರಿದಂತೆ ಗುರುಕುಲದ ಹಲವಾರು ಜನರು ಉಪಸ್ಥಿತರಿದ್ದರು.

Total Views 44
RELATED ARTICLES

Most Popular

Recent Comments

KNN City News
Home
E-Paper