
ಬೆಳಗಾವಿ
ಜಿಲ್ಲೆಯಲ್ಲಿ ಆರಿದ್ರ ಮಳೆ ಮುಂದುವರೆದಿದ್ದು, ಖಾನಾಪುರ ತಾಲೂಕಿನ ಕಣಕುಂಬಿ ಹಾಗೂ ಚಿಗಳೆ ಮಾರ್ಗದ ಅರಣ್ಯ ಪ್ರದೇಶದ ರಸ್ತೆಯ ನಡುವೆ ಬೃಹತ್ ಆಕಾರದ ಮರ ಬಿದ್ದು ಸಾರ್ವಜನಿಕರು ಪರದಾಡಿದ ಘಟನೆ ನಡೆದಿದೆ.
ಆಷಾಢ ಏಕಾದಶಿ ಹಿನ್ನೆಲೆಯಲ್ಲಿ ಚಿಗುಳೆಯಿಂದ ದಿಂಡಿ ಪಾದಯಾತ್ರೆ ಹೊರಟ್ಟಿದ್ದ ಭಕ್ತರು ಕಾಡಿನ ನಡುವೆ ಬಿದ್ದಿದ್ದ ಬೃಹತ್ ಆಕಾರದ ಮರವನ್ನು ತೆರವುಗೊಳಿಸಲು ಹರಸಾಹಸ ಪಟ್ಟರು. ಖಾನಾಪುರದಿಂದ ಕಣಕುಂಬಿ ಕಡೆಗೆ ಹೊರಟ್ಟಿದ್ದ ಕೊನೆಯ ಬಸ್ ಸಹ ನಿಂತಲ್ಲೆ ನಿಂತಿತ್ತು. ಕೊನೆಗೆ ದಿಂಡಿ ಯಾತ್ರಿಗಳು ಹಾಗೂ ಸಾರಿಗೆ ಬಸ್ ಚಾಲಕ ಸೇರಿಕೊಂಡು ಬಿದ್ದ ಮರವನ್ನು ತೆರವು ಮಾಡಿದರು.
