Monday, November 23, 2026
HomeBelagaviಬೆಳಗಾವಿಯಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಬೆಳಗಾವಿಯಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಬೆಳಗಾವಿ

ಬೆಳಗಾವಿ ನಗರದಲ್ಲಿ‌ ಮನಕಲುಕುವ ಘಟನೆ ನಡೆದಿದ್ದು, ವಿಷ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿ ಮೂವರ ಮೃತಪಟ್ಟಿದ್ದರೆ, ಓರ್ವಳ ಸ್ಥಿತಿ ಗಂಭೀರವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಸಂತೋಷ ಕುರಡೇಕರ್ ( 44) , ಸುವರ್ಣ ಕುರಡೇಕರ್ , ಮಂಗಳಾ ಕುರಡೇಕರ್ ಆತ್ಮಹತ್ಯೆ ‌ಮಾಡಿಕೊಂಡವರು. ಸುನಂದ ಕುರಡೇಕರ್ ಸ್ಥಿತಿ ‌ಚಿಂತಾಜನಂಕವಾಗಿದೆ.ಬೆಳಗಾವಿ ನಗರದ ಜೋಷಿಮಾಳದಲ್ಲಿ ನಡೆದ ಘಟನೆ ನಡೆದಿದೆ. ತಾಯಿ, ಮಗ, ಮಗಳು ಸಾವು, ಓರ್ವ ಮಗಳ ಸ್ಥಿತಿ ಗಂಭೀರವಾಗಿದೆ.
ಇಂದು ಬೆಳಗ್ಗೆ 9 ಗಂಟೆಗೆ ವಿಷ ಸೇವಿಸಿರುವ ಕುಟುಂಬಸ್ಥರು. ಗಂಭೀರವಾಗಿರುವ ಮಗಳನ್ನು ಸ್ಥಳೀಯ ‌ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸ್ಥಳಕ್ಕೆ ಶಹಾಪುರ ಪೊಲೀಸರ್ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Total Views 361
RELATED ARTICLES

Most Popular

Recent Comments

KNN City News
Home
E-Paper