
ಬೆಳಗಾವಿ
ಪಶ್ಚಿಮ ಘಟಕದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ವಾಟರ್ ಮ್ಯಾನ್ ಓರ್ವ ಹಳ್ಳದ ನೀರಿನ ರಭಸಕ್ಕೆ ವಾಹನದ ಸಮೇತ ಕೊಚ್ಚಿಹೋದ ಘಟನೆ ತಾರಿಹಾಳ ಗ್ರಾಮದಲ್ಲಿ ನಡೆದಿದೆ.
ಖಾನಾಪುರ ತಾಲೂಕಿನ ಗಾಡಿಕೊಪ್ಪದ ವಾಟರ್ ಮ್ಯಾನ್ ಸುರೇಶ ನಿಜಗುಣಿ ಗುಂಡಣ್ಣವರ ಹಳ್ಳದ ನೀರಿಗೆ ಕೊಚ್ಚಿಹೋದವರು. ಚಂದನಹೊಸುರುನಲ್ಲಿ ಪೈಪ್ ಲೈನ್ ರಿಪೇರಿ ಮಾಡಿ ಮರಳಿ ತಾರಿಹಾಳ ಗ್ರಾಮಕ್ಕೆ ಬರುವಾಗ ಹಳ್ಳದ ನೀರು ಹೆಚ್ಚಾಗಿ ಬಂದ ಪರಿಣಾಮ ದ್ವಿಚಕ್ರ ವಾಹನ ಸಮೇತ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
