
ಬೆಳಗಾವಿ
ಸಾರ್ವಜನಿಕರು ಮೊಬೈಲ್ ಕಳೆದು ಹೋದರೆ ಕರ್ನಾಟಕ ರಾಜ್ಯದ ಮೊಬೈಲ್ ಇ- ಲಾಸ್ಟ್ ಆ್ಯಪ್ ಹಾಗೂ ಸೆಂಟ್ರಲ್ ಇಕ್ಯೂಮೆಂಟ್ ಐಡೆಂಟಿಟಿ ರೆಜಿಸ್ಟರ್ ನಲ್ಲಿ ಕಳೆದ ಮೊಬೈಲ್ ಮಾಹಿತಿ ಹಾಕಿದರೆ ಕಳೆದ ಮೊಬೈಲ್ ಪತ್ತೆ ಹಚ್ಚಬಹುದು ಎಂದು ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಹೇಳಿದರು.
ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಹೋದ ಮೊಬೈಲ್ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದಾಗ ಬೇರೆಯವರು ಖರೀದಿ ಮಾಡಿದಾಗ ಸಿಇಎನ್ ಪೊಲೀಸರು ಅದನ್ನು ಪತ್ತೆ ಮಾಡಿ ಮೊಬೈಲ್ ಪಡೆದವರು ಮೊಬೈಲ್ ಮರಳಿಸುವಂತೆ ಕರೆ ಮಾಡಲಾಗುವದು ಎಂದರು.
ಇಲ್ಲಿಯವರೆಗೆ ಸುಮಾರು 114 ಕಳೆದ ಮೊಬೈಲ್ ಪತ್ತೆ ಹಚ್ಚಲಾಗಿದೆ. ಸಾರ್ವಜನಿಕರ ಮೊಬೈಲ್ ಕಳೆದರೆ ಪೊಲೀಸ್ ಠಾಣೆಗೆ ದೂರು ನೀಡಿದರೆ ಮೊಬೈಲ್ ಪತ್ತೆ ಹಚ್ಚಲಾಗುವುದು ಎಂದರು.
