
ಬೆಳಗಾವಿ
ಧಾರಾಕಾರ ಮಳೆಗೆ ವಾಟರ್ ಮ್ಯಾನ್ ಓರ್ವ ಹಳ್ಳದ ನೀರಿನ ರಭಸಕ್ಕೆ ವಾಹನದ ಸಮೇತ ಕೊಚ್ಚಿಹೋದ ಘಟನೆಗೆ ಸಂಬಂಧಿಸಿದಂತೆ ಬುಧವಾರ ಮಣಿಕಟ್ಟಿ ಗ್ರಾಮದ ಸೇತುವೆ ಬಳಿ ವಾಟರ್ ಮ್ಯಾನ್ ಬೈಕ್ ಪತ್ತೆಯಾಗಿದೆ.
ಖಾನಾಪುರ ತಾಲೂಕಿನ ಗಾಡಿಕೊಪ್ಪದ ವಾಟರ್ ಮ್ಯಾನ್ ಸುರೇಶ ನಿಜಗುಣಿ ಗುಂಡಣ್ಣವರ ಹಳ್ಳದ ನೀರಿಗೆ ಕೊಚ್ಚಿಹೋದ್ದರು. ಚಂದನಹೊಸುರುನಲ್ಲಿ ಪೈಪ್ ಲೈನ್ ರಿಪೇರಿ ಮಾಡಿ ಮರಳಿ ತಾರಿಹಾಳ ಗ್ರಾಮಕ್ಕೆ ಬರುವಾಗ ಹಳ್ಳದ ನೀರು ಹೆಚ್ಚಾಗಿ ಬಂದ ಪರಿಣಾಮ ದ್ವಿಚಕ್ರ ವಾಹನ ಸಮೇತ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಮಣಿಕಟ್ಟಿಯಿಂದ ಸುಮಾರು ಐದು ಕಿ.ಮೀ ದೂರದ ನಾವಲಗಟ್ಟಿ ಗ್ರಾಮದವರೆಗೂ ವಾಟರ್ ಮ್ಯಾನ್ ಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ತಿಗಡಿ ಹರಿನಾಲ ಡ್ಯಾಮ್ ಹಿನ್ನಿರಿನಲ್ಲಿ ಶೋಧ ನಡೆಸಿದ್ದು, ಸ್ಥಳದಲ್ಲಿ ಹಿರೇಬಾಗೇವಾಡಿ ಪೊಲೀಸರು ಹಾಗೂ ಎಸ್ ಡಿಆರ್ ಎಫ್ ತಂಡ ಬಿಡು ಬಿಟ್ಟಿದ್ದಾರೆ.
