
ಬೆಳಗಾವಿ
ಇಲ್ಲಿನ ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಜೈ ಕಿಸಾನ್ ಖಾಸಗಿ ಮಾರುಕಟ್ಟೆಯ ಮಾರ್ಕೆಟ್ ಲೈಸನ್ಸ್ ರದ್ದು ಮಾಡಿ ಸರಕಾರ ಆದೇಶ ಹೊರಡಿಸಿದ್ದು, ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ರಾಜಕುಮಾರ ಟೋಪಣ್ಣವರ ಹೇಳಿದರು.
ಸೋಮವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ 2015ರಿಂದಲೂ ಜೈ ಕಿಸಾನ್ ಖಾಸಗಿ ಮಾರುಕಟ್ಟೆಯ ತರಕಾರಿ ಮಾಫಿಯಾ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇವೆ.ಒಳ್ಳೆಯ ರಾಜಕೀಯ ನಾಯಕತ್ವ, ಒಳ್ಳೆಯ ನಾಯಕತ್ವದ ಉದಾಹರಣೆ ಈ ಪ್ರಕಟಣೆಯಲ್ಲಿ ಸಾಬೀತಾಗಿದೆ ಎಂದರು.
ಕೇಂದ್ರ ಸರಕಾರ ಕೃಷಿ ಮಸೂದೆ ಕಾಯ್ದೆ ಜಾರಿಗೆ ತಂದ ಬಳಿಕ ಪಾಪದ ಕೂಸು ಜೈ ಕಿಸಾನ್ ಮಾರುಕಟ್ಟೆ ನಿರ್ಮಾಣವಾಯಿತು. ಬಳಿಕ ಕೇಂದ್ರ ಸರಕಾರ ಕೃಷಿ ಮಸೂದೆಯನ್ನು ಹಿಂಪಡೆದು. ಆ ಮಸೂದೆ ಹಿಂಪಡೆಯಲು ರಾಜ್ಯ ಸರಕಾರಕ್ಕೆ ಮೇಲೆ ಹಾಕಿದರು.
ಖಾಸಗಿ ಮಾರುಕಟ್ಟೆಯವರು ರೈತರ ಬಳಿ ವರ್ತಕರು ಕಮಿಷನ್ ತೆಗೆದುಕೊಳ್ಳಬಾರದು ಎಂದು ಎಂಬ ನಿಯಮ ಇದ್ದರೂ ಆದರೆ ಜೈ ಕಿಸಾನ್ ಖಾಸಗಿ ಮಾರುಕಟ್ಟೆಯವರು ರೈತರಿಂದ ಲೂಟಿ ಮಾಡಿದ್ದಾರೆ. ಇದು ಸಾಭಿತಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಸತೀಸ್ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಶಾಸಕ ಆಸೀಫ್ ಸೇಠ್ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಅವರ ಸಹಾಯದಿಂದ ಖಾಸಗಿ ಮಾರುಕಟ್ಟೆಯ ಲೈಸನ್ಸ್ ರದ್ದು ಮಾಡಿದ್ದಾರೆ ಎಂದರು.
ಜೈ ಕಿಸಾನ್ ಖಾಸಗಿ ಮಾರುಕಟ್ಟೆಯಲ್ಲಿರುವ ವ್ಯಾಪಾರಸ್ಥರು ತಮ್ಮ ಸದಸ್ಯರಿಗೂ ಅನ್ಯಾಯ ಮಾಡಿದ್ದಾರೆ. ಜೈ ಕಿಸಾನ್ ಖಾಸಗಿ ಮಾರುಕಟ್ಟೆ ಅವರು ಕೋ ಆಪರೇಟಿವ್ ಸೊಸೈಟಿಯಲ್ಲಿ ರೈತರಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಖಾಸಗಿ ಮಾರುಕಟ್ಟೆ ಲೈಸನ್ಸ್ ಬಂದ್ ಮಾಡಿರವುದು ರೈತರಿಗೆ ಸಿಕ್ಕ ಜಯವಾಗಿದೆ ಎಂದರು.
ನಾವು ಜೈ ಕಿಸಾನ್ ಖಾಸಗಿ ಮಾರುಕಟ್ಟೆ ವಿರೋಧಿಯಲ್ಲ. ಆದರೆ ಸರಕಾರಿ ಎಪಿಎಂಸಿ ನಷ್ಟದಲ್ಲಿರುವುದರಿಂದ ರೈತರಿಗೆ ಹಾಗೂ ಎಪಿಎಂಸಿ ವರ್ತಕರಿಸಿ ತೊಂದರೆಯಾಗಬಾರದು. ಜೈ ಕಿಸಾನ್ ಖಾಸಗಿ ಮಾರುಕಟ್ಟೆಯವರು ಎಪಿಎಂಸಿಗೆ ಬರುವುದಾರೆ ನಾವು ಅವರ ಪರವಾಗಿ ಹೋರಾಟ ಮಾಡಲಾಗುವುದು ಎಂದರು.
ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ ಮಾತನಾಡಿ, ಜೈ ಕಿಸಾನ್ ಖಾಸಗಿ ಮಾರುಕಟ್ಟೆ ಕಳೆದ 2021ರಂದು ಟ್ರೆಡ್ ಲೈಸನ್ಸ್ ಪಡೆದಿದ್ದರು. ಆದರೆ ಅದು ಕಾನೂನು ಬಾಹಿರವಾಗಿ ಇರುವುದರಿಂದ ಸರಕಾರ ಅದನ್ನು ಈಗ ರದ್ದು ಮಾಡಿ ಆದೇಶ ಹೊರಡಿಸಿದೆ.
130 ಕೋಟಿ ರೂ. ವೆಚ್ಚ ಮಾಡಿ ಎಪಿಎಂಸಿಯಲ್ಲಿ ಸರಕಾರದಿಂದ ಸುಸಜ್ಜಿತ ಮಳಿಗೆ ನಿರ್ಮಾಣ ಮಾಡಿದ್ದರೂ ಇದಕ್ಕೆ ಸಡ್ಡು ಹೊಡೆದು 2021ರಲ್ಲಿ ಮೃತಪಟ್ಟ ವ್ಯಕ್ತಿ ಹೆಸರಿನಲ್ಲಿ ಕಟ್ಟಡ ಅನುಮತಿ ಪಡೆದು ಖಾಸಗಿ ಮಾಫಿಯಾ ಮಾಡುವುದರ ಮೂಲಕ ರೈತರಿಗೆ ವಂಚನೆ ಮಾಡಿದ್ದರು ಎಂದು ಆರೋಪಿಸಿದರು.
ಹೈಕೋರ್ಟ್ ನ್ಯಾಯವಾದಿ ನಿತಿನ್ ಬೊಳಬಂದಿ ಮಾತನಾಡಿ, ಇಲ್ಲಿನ ಜೈ ಕಿಸಾನ್ ಖಾಸಗಿ ಮಾರುಕಟ್ಟೆಯವರು ಕಳೆದ 2021ರಲ್ಲಿ ಕಾನೂನು ಬಾಹಿರವಾಗಿ ಟ್ರೆಡ್ ಲೈಸನ್ಸ್ ಪಡೆದು ರೈತರಿಂದ ಹೆಚ್ಚುವರಿ ಹಣ ಸುಲಿಗೆ ಮಾಡುವುದು, ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ನಡೆಯುತ್ತಿದ್ದರೂ ಕೋಲ್ಡ್ ಸ್ಡೋರೆಜ್ ವ್ಯವಸ್ಥೆ, ತರಕಾರಿ ಬರುವುದು ಹಾಗೂ ಹೊರಗಡೆ ಹೋಗುವುದರ ಬಗ್ಗೆ ಯಾವುದೇ ದಾಖಲೆ ಇಟ್ಟುಕೊಂಡಿರಲ್ಲ ಎಂದರು.
ಜೈ ಕಿಸಾನ್ ಖಾಸಗಿ ಮಾರುಕಟ್ಟೆಯವರು ರೈತರಿಗೆ ಮೋಸ ಮಾಡುತ್ತಿರುವ ಕುರಿತು ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟ ಬಳಿಕ ಸರಕಾರ ಒಂದು ಕಮಿಟಿ ರಚನೆ ಮಾಡಿ ತನಿಖೆ ನಡೆಸಿ ಕಳೆದ 2021 ರಂದು ಜೈ ಕಿಸಾನ್ ಖಾಸಗಿ ಮಾರುಕಟ್ಟೆಗೆ ನೀಡಿದ್ದ ಟ್ರೆಡ್ ಲೈಸನ್ಸ್ ನ್ನು ಸರಕಾರ ರದ್ದು ಮಾಡಿದೆ. ಈಗ ಅಲ್ಲಿ ಯಾವುದೇ ವ್ಯವಹಾರ ನಡೆಯದಂತೆ ಸೂಚನೆ ನೀಡಿದೆ ಎಂದರು.
