
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಮತ್ತೆ ಬುಗಿಲೆದ್ದ ವಿವಾದ ದಿಢೀರ ನಡೆದ ಬೆಳವಣಿಗೆಯಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿಯನ್ನು ಪೀಠದಿಂದ ಉಚ್ಛಾಟನೆ ಮಾಡಲಾಗಿದೆ.
ಕೂಡಲಸಂಗಮ ಪಂಚಮಸಾಲಿ ಟ್ರಸ್ಟ್ ನ ಕಾರ್ಯಕಾರಣಿ ಸಭೆಯಲ್ಲಿ ನಿರ್ಧಾರ ಮಾಡಿದ್ದು ಕೂಡಲಸಂಗಮದಲ್ಲಿ ಮಾಧ್ಯಮಗಳ ಎದುರು ಟ್ರಸ್ಟಿಗಳ ತೀರ್ಮಾನ ಪ್ರಕಟಿಸಿದ ಟ್ರಸ್ಟ್ ಕಾರ್ಯದರ್ಶಿ ನೀಲಕಂಠ ಅಸೂಟಿ. ಸ್ವಾಮೀಜಿ ಬಗ್ಗೆ ಸಾಕಷ್ಟು ದೂರುಗಳು ಇವೆ. ಟ್ರಸ್ಟ್ ನ ಮಾತು ಕೇಳಲ್ಲ, ಅವರ ವಿರುದ್ಧ ದೊಡ್ಡ ಫೈಲ್ ಇದೆ. ಅದಕ್ಕೆ ಇವತ್ತು ಅವರನ್ನ ಪೀಠದಿಂದ ಉಚ್ಛಾಟಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ನಿರ್ಧಾರ ಮಾಡಿದ್ದಾರೆ.
