Monday, November 23, 2026
HomeBelagaviಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿಗೆ ಮರಣ ದಂಡಣೆ ಶಿಕ್ಷೆ ಪ್ರಕಟ: ಪಾಟೀಲ್

ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿಗೆ ಮರಣ ದಂಡಣೆ ಶಿಕ್ಷೆ ಪ್ರಕಟ: ಪಾಟೀಲ್

ಬೆಳಗಾವಿ
ಚಾಕಲೇಟ್ ತರಲು ಬಂದಿದ್ದ 8 ವರ್ಷದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಬಳಿಕ ಸಾಕ್ಷ್ಯ ನಾಶಮಾಡಲು ಬಾವಿಯಲ್ಲಿ ಮೃತ ದೇಹ ಹಾಕಿದ್ದ ಅಪರಾಧಿ ಭರತೇಶ ರಾವಸಾಬ್ ಮಿರ್ಜೆಗೆ ಶುಕ್ರವಾರ ಮರಣ ದಂಡಣೆ ಹಾಗೂ ಜೀವಾವಧಿ ಶಿಕ್ಷೆಯನ್ನು ಪೋಕ್ಸ್ ನ್ಯಾಯಾಲಯದ ನ್ಯಾಯಾಧೀಶೆ ಪುಷ್ಪಲತಾ ತೀರ್ಪು ಪ್ರಕಟಿಸಿದ್ದಾರೆ ಎಂದು ಜಿಲ್ಲಾ ಪೋಕ್ಸೊ ಸರಕಾರಿ ವಿಶೇಷ ಅಭಿಯೋಚಕ ಎಲ್.ವಿ. ಪಾಟೀಲ್ ಹೇಳಿದರು.
ಬೆಳಗಾವಿಯಲ್ಲಿ ಮಾತನಾಡಿದರು. ಚಾಕಲೇಟ್ ತರಲು ಅಂಗಡಿಗೆ ಬಂದಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅಪರಾಧಿಯ ಹಳೆ ಮನೆಗೆ ಕರೆದುಕೊಂಡು‌ ಹೋಗಿ ಅತ್ಯಾಚಾರ ಮಾಡಿದ್ದ ಬಾಲಕಿ ಕೂಗಾಟ ಮಾಡಿದ್ದರಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಆ ಶವವನ್ನು ಬಾವಿಗೆ ಹಾಕಿದ್ದ. ಕಳೆದ 15 ಅಕ್ಟೋಬರ್ 2019ರಂದು ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿ ತಂದೆ ಕುಡುಚಿ ಪೊಲೀಸ್ ಠಾಣೆಯಲ್ಲಿ ನಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರು ಎಂದರು.
ತಂದೆಯ ದೂರಿನ ಆದಾರದ ಮೇಲೆ ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಕುಡುಚಿ ಪೊಲೀಸರು ಶ್ವಾನ ದಳದೊಂದಿಗೆ ಬಾಲಕಿಯ ಓಡಾಡಿದ ಸ್ಥಳದಲ್ಲಿ ಪರಿಶೀಲನೆ ಮಾಡಿದಾಗ ಬಾವಿಯಲ್ಲಿ ಬಾಲಕಿ ಇರುವುದನ್ನು ಖಚಿತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಬೋರ್‌ವೆಲ್‌ನಲ್ಲಿ ಕ್ಯಾಮರಾ ಬಿಟ್ಟು ಪೊಲೀಸರು ಮೃತ ಬಾಲಕಿಯ ಮೃತದೇಹ ಪತ್ತೆ ಮಾಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅತ್ಯಾಚಾರ ಮಾಡಿದ ಅಪರಾಧಿ ವಿರುದ್ಧ ಮಹತ್ವದ ಸಾಕ್ಷ್ಯ ಸಂಗ್ರಹ ಮಾಡಿದ್ದರು‌. ಈ ಹಿನ್ನೆಲೆಯಲ್ಲಿ ಪೋಕ್ಸೊ ನ್ಯಾಯಾಲಯ ಅಪರಾಧಿಗೆ ಮರಣ ದಂಡಣೆ ಶಿಕ್ಷೆ ಪ್ರಕಟ ಮಾಡಿದೆ ಎಂದರು.

Total Views 26
RELATED ARTICLES

Most Popular

Recent Comments

KNN City News
Home
E-Paper