
ಬೆಳಗಾವಿ
ಕೊಣ್ಣುರು ಗಲಭೆ, ಐಗಳಿ ಕೊಲೆ ಪ್ರಕರಣ, ಎ.ಕೆ.47 ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಕುರಿತು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದೇನೆ. ಅವಶ್ಯಕತೆ ಬಿದ್ದರೆ ದೆಹಲಿಗೂ ಹೋಗಿ ಬರುತ್ತೇನೆ ಎಂದು ಮಾಜಿ ಸಂಸದ ರಮೇಶ್ ಕತ್ತಿ ಹೇಳಿದರು.
ಭಾನುವಾರ ಬೆಳಗಾವಿ ಬಿ.ಕೆ.ಮಾಡೆಲ್ ಹೈಸ್ಕೂಲ್ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಹುಕ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದ 15 ಸ್ಥಾನಗಳಿಗೆ ನಡೆದ ಹುಕ್ಕೇರಿ ಮತಕ್ಷೇತ್ರದ 92 ಮತದಾರರು ಮತದಾನ ಮಾಡಬೇಕು. ನೂರಕ್ಕೆ ನೂರರಷ್ಟು ಮತದಾನವಾಗಿದೆ.ವ್ಯವಸ್ಥಿತವಾಗಿ ಜಿಲ್ಲಾಧಿಕಾರಿ, ಜಿಲ್ಲಾಚುನಾವಣಾಧಿಕಾರಿ ಈ ಚುನಾವಣೆಯನ್ನು ಎಲ್ಲ ಇಲಾಖೆಯ ಸಹಕಾರದಿಂದ ಶಾಂತ ರೀತಿಯಲ್ಲಿ ನಡೆಸಿಕೊಟ್ಟಿದೆ. ವಿಶೇಷವಾಗಿ ಪೊಲೀಸ್ ಇಲಾಖೆಯೂ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಿಗೆ ಧನ್ಯವಾದ ಹೇಳಿದರು.
ಬೆಳಗಾವಿ ಡಿಸಿಸಿ ಬ್ಯಾಂಕ್ ನ 9ನೇ ಬಾರಿ ಡಿಸಿಸಿ ಬ್ಯಾಂಕ್ ಗೆ ನಿರ್ದೇಶಕನಾಗಿ ದಾಖಲೆ ಮಾಡುತ್ತೇನೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಅಥಣಿ ರಾಯಬಾಗ, ರಾಮದುರ್ಗ ಘೋಷಣೆ ಅಧಿಕೃತವಾಗಿ ಮಾಡುತ್ತಾರೆ. ಬೈಲಹೊಂಗಲ, ನಿಪ್ಪಾಣಿ, ಕಿತ್ತೂರು ಹಾಗೂ ಹುಕ್ಕೇರಿ ಮತ ಏಣಿಕೆ ಮಾಡುತ್ತಾರೆ. ಇವು ವಿಳಂವವಾಗಬಹುದು. ಕೆಲವರು ನ್ಯಾಯಾಲಯಕ್ಕೆ ಹೋದ ಹಿನ್ನೆಲೆಯಲ್ಲಿ ನ್ಯಾಯಾಲಯ ನಿರ್ದೆಶನ ಮಾಡಿದೆ. ಈಗ ಅದು ಮತದಾನ ಏಣಿಕೆಯ ಮಾಹಿತಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಬಳಿಕ ಬರುವ ಅ.28 ರಂದು ಪ್ಯಾಲೆಟ್ ಪೇಪರ್ ಓಪನ್ ಮಾಡಿ ವಿಜಯಶಾಲಿ ಆದವರ ಘೋಷಣೆ ಮಾಡುತ್ತಾರೆ ಎಂದರು.
ಸಮಾನ ಮನಸ್ಕರ ಆಡಳಿತ ಚುಕ್ಕಾಣಿ ಡಿಸಿಸಿ ಬ್ಯಾಂಕ್ ಆಡಳಿತ ನಡೆಸುತ್ತದೆ. 1986ರಲ್ಲಿ ನಾನು ಮೊದಲನೇ ಚುನಾವಣೆ ಮಾಡಿದ್ದೆ. ಮೆಟಗುಡ್ಡ ಎನ್ನುವವರು ನನ್ನ ವಿರುದ್ಧ ಸ್ಪರ್ಧೆ ಮಾಡಿದ್ದರು. ಅದಾದ ಬಳಿಕ ಈಗ ಚುನಾವಣೆ ನಡೆಯುತ್ತದೆ. ರಾಮ ಲಕ್ಷ್ಮಣ ಮೊದಲಿನಿಂದಲೂ ಇದೆ. ಈಗ ಇರುತ್ತದೆ. ಎಲ್ಲೆಲ್ಲಿ ದಬ್ಬಾಳಿಕೆ ನಡೆಯುತ್ತದೆಯೋ ಅಲ್ಲಿ ರಾಮ ಲಕ್ಷ್ಮಣ ಒಂದಾಗಿ ಹೋರಾಟ ಮಾಡುತ್ತೇವೆ ಎಂದರು.
ನಾವು ಮಾತನಾಡಿದರೆ ಕಾನೂನು ಅವರು ಮಾತನಾಡಿದರೆ ಇಲ್ಲವೆ ಎಂದು ಜಾರಕಿಹೊಳಿ ಬ್ರದರ್ಸ್ ವಿರುದ್ಧ ಹರಿಹಾಯ್ದರು.
ಎ.ಕೆ.47 ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಕುರಿತು ಹಾಗೂ ಐಗಳಿ ಪ್ರಕರಣ, 1996 ರಲ್ಲಿ ಕೊಣ್ಣೂರು ಗಲಭೆಯ ಬಗ್ಗೆ ಕೇಂದ್ರ ಸರಕಾರಕ್ಕೆ ತನಿಖೆಯಾಗುವಂತೆ ಪತ್ರ ಬರೆದಿದ್ದೇನೆ. ಅಲ್ಲದೆ, ಘಟಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಯ ವಿರುದ್ಧವೂ ಪತ್ರ ಬರೆದಿದ್ದೇನೆ. ಸಂಪೂರ್ಣ ತನಿಖೆ ನಡೆಸಬೇಕೆಂದು ಪತ್ರ ಬರೆದಿದ್ದು ಅವಶ್ಯ ಬಿದ್ದರೆ ದೆಹಲಿಗೂ ಹೋಗಿ ಬರುವೆ ಎಂದರು.
