Friday, November 20, 2026
HomeBelagaviHey.. ಯಾರೋ ನೀ... ಕಾಗೆ, ಮಲ್ಲಿಕಜಾನ್ ಟಾಕ್ ವಾರ್

Hey.. ಯಾರೋ ನೀ… ಕಾಗೆ, ಮಲ್ಲಿಕಜಾನ್ ಟಾಕ್ ವಾರ್

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನದ ನಾಮಪತ್ರ ಸಲ್ಲಿಕೆಯ ವೇಳೆ ಜೋಡೆತ್ತು ಹಾಗೆ ಬಂದ ಶಾಸಕ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಬಳಿಕ ಸವದಿ ಬಿಟ್ಟು ಅವಿರೋಧವಾಗಿ ಆಯ್ಕೆಯಾಗಿದ್ದ ಕಾಗೆಗೆ ಸವದಿ ಅಭಿಮಾನಿ ಕರೆ ಮಾಡಿ ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡ ಆಡಿಯೋ ವೈರಲ್ ಆಗಿದೆ.
ಅಥಣಿಯ ಮಲ್ಲಿಕನಾಜ್ ನಧಾಫ್ ಹಾಗೂ ಕಾಗೆ ನಡುವಿನ ಸಂಭಾಷಣೆ ಹೀಗಿದೆ.

ಕಾಗೆ: ಹಲೋ.. ಹಲೋ

ಮಲ್ಲಿಕಜಾನ್ : ಅಥಣಿಯಿಂದ ಮಲ್ಲಿಕಜಾನ್ ನದಾಫ್ ಮಾತಾಡೋದ್ರಿ ಸಾಹೇಬ್ರ
ಕಾಗೆ: ಹಾ ಹೇಳ್ರಿ ಅಣ್ಣಾ
ಮಲ್ಲಿಕಜಾನ್: ಎಷ್ಟದಿನದಿಂದ ಕಾಯಕೊಂತ ಕುಂತಿದ್ರಿ ನಮ್ಮ ಸಾಹುಕಾರಗ ದುಬ್ಬದಾಗ ಹಾಕಾಕ ಚಾಕು ರೀ.

ಕಾಗೆ: ಹಾ…

ಮಲ್ಲಿಕಜಾನ್: ಎಷ್ಟದಿನದಿಂದ ಕಾಯಕೊಂತ ಕುಂತಿದ್ರಿ ಸಾಹುಕಾರ‌ ನೀವು

ಕಾಗೆ: ಏನ್

ಮಲ್ಲಿಕಜಾನ್: ಈ ನಮೋನಿ ನಮ್ಮ ಸಾಹುಕಾರ್ ಗೆ ಮೋಸ ಮಾಡಿದ್ರಿ.

ಕಾಗೆ: ನಾನ ಮಾಡೇನಿ

ಮಲ್ಲಿಕಜಾನ್: ನೀವರಿ

ಕಾಗೆ: ಹೇ ಯಾರೋ ನೀ..

ಮಲ್ಲಿಕಜಾನ್: ಮಲ್ಲಿಕ್ ನದಾಫ್ ಅಂಥ ಹೇಳ್ಲಿಲ್ರಿ ಸಾಹೇಬ್ರ

ಕಾಗೆ: ನಿನಗ್ ಯಾನ್ ಸಂಬಂಧೋ ನನ್ಯಾಕ್..

ಮಲ್ಲಿಕಜಾನ್: ಸಂಬಂಧ ಅಲ್ಲ ನಮ್ಮ ಸಾಹುಕಾರ್ ಗ ಎಷ್ಟ ಇದ ಆಗೇತ್ತಿ ಗೊತ್ತ ಏನ್ರಿ ಸಾಹೇಬ್ರ್

ಕಾಗೆ: ಏನಾಗೇತ್ತಿ

ಮಲ್ಲಿಕಜಾನ್: ಏನ್ ಅವರ ಮೊಖಾ ಎತ್ತಿ ತಿರದಂಗ ಮಾಡಿರಿ ನೀವು

ಕಾಗೆ: ನಾನ್ಯಾಕ್ ಮಾಡೇನೋ ಎಲ್ಲಿಯವಾ ನೀನ, ಯಾವೋ ನೀನ ಮುಂದ ಬಾ ಇಲ್ಲಿ

ಮಲ್ಲಿಕಜಾನ್: ನಾನು ನಿಮ್ಗ ಹೆಸ್ರ್ ಹೇಳೇನಿಅಲ್ರಿ ಬರಲಿ ಏನ್ರಿ ಅಲ್ಲಿ

ಕಾಗೆ: ಎಲ್ಲಿ ಅದಿಯೋ ನೀನ ನೀನ್ ಯಾವ ನನ್ನ ಕೇಳಾಕ

ಮಲ್ಲಿಕಜಾನ್: ಸರ್ ನೆಟ್ಟಗ್ ಮಾತಾಡ್ರಿ

ಕಾಗೆ: ನಿ ಯಾವೋ ನಂಗ ಕೇಳವಾ

ಮಲ್ಲಿಕಜಾನ್: ಸರ್ ಚಲೋತಂಗ ಮಾತಾಡಾತ್ತೇವಿ ಸಾಹೇಬ್ರ ನೀವ ನಮ್ಮ ಸಾಹುಕಾರ್ ಗೆ ಯಾಕ ದೋಖಾ ಮಾಡಿದ್ರಿ ನೀವು
ಕಾಗೆ: ನಾಯಾನ್ ಮಾಡೇನೋ.. ನಾ ಯಾನ್ ಮಾಡೇನಿ ನಿಂಗ್

ಮಲ್ಲಿಕಜಾನ್: ಅಲ್ರಿ ನಮ್ಮ ಜೋಡೆ ಬಂದ ಜೋಡೆತ್ತು ಆ ಎತ್ತ ಅಂದ ಭಾಷಣದಾಗ ನಮ್ಮ ಸಾಹುಕಾರ್ ಹೆಲ್ಪ್ ತೊಗೊಂಡ್ರಿ ಮತ್ತ ಅದ ಹಾಡ ಮಾಡಿದ್ರಿಲ್ಲ ನೀವು
ಕಾಗೆ: ನೀ ಬಾ ನನ್ನ ಎದುರಗಡೆ ಬಂದ ಕೇಳ ನೀನ ಕರೆ ಗಂಡಸ್ ಇದ್ರ ಎದರಿಗೆ ಬಂದ ಕೇಳ
ಮಲ್ಲಿಕಜಾನ್: ಕೇಳ್ತೇನಲ್ರಿ ಗಂಡಸ್ತನ್ ಯಾಕ್ ಬೇಕು

ಕಾಗೆ: ಇಲ್ಲಿ ಬಂದ ಕೇಳ
ಮಲ್ಲಿಕಜಾನ್ ಇದ್ರಾಗ್ ಯಾಕ ಗಂಡಸ್ತನ್ ಬರತೈತ್ತಿ ಹೇಳ್ರಿ

ಕಾಗೆ: ಕೇಳ್ತೇನಿ ಬಾ ನನ್ನ ಜೊಡೆ ಬಾ
ಮಲ್ಲಿಕಜಾನ್: ಅಲ್ಲಾ ಗಂಡಸ್ತನಾ ಎದ್ರದ ಹೇಳ್ರಿ

ಕಾಗೆ: ಬಾಲೋ ನೀನ ಎದರ ಬಂದ ಕೇಳಾಕೋ

ಮಲ್ಲಿಕಜಾನ್: ಕೇಳ್ತೇನಿ ಅಲ್ರಿ

ಕಾಗೆ: ಹಾ ಕೇಳ ಹೇಳ್ತೇನಿ

Total Views 233
RELATED ARTICLES

Most Popular

Recent Comments

KNN City News
Home
E-Paper