
ಬೆಳಗಾವಿ
ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿದ ಜಿಲ್ಲೆಯ 11 ಜನ ಪತ್ರಕರ್ತರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲು ನಿರ್ಧರಿಸಲಾಗಿದೆ.
ವಿಜಯವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರ ಮಂಜುನಾಥ ಕೋಳಿಗುಡ್ಡ, ಟಿವಿ9 ವರದಿಗಾರ ಸಹದೇವ ಮಾನೆ, ಕನ್ನಡಪ್ರಭ ದಿನಪತ್ರಿಕೆಯ ಉಪ ಸಂಪಾದಕ ಸದಾನಂದ ಮಜತಿ, , ಕೆ.ಪಿ.ಎನ್ ಸಂಸ್ಥೆಯ ಛಾಯಾಗ್ರಾಹಕ ವೀರನಗೌಡ ಇನಾಮತಿ, ಅನಿಲ್ ಕಾಜಗಾರ, ಕ್ಯಾಮರಾಮನ್ ಗಳಾದ ಪ್ರವೀಣ ಶಿಂಧೆ, ರವಿ ಭೋವಿ, ಲೋಕಕ್ರಾಂತಿ ದಿನಪತ್ರಿಕೆಯ ಸಂಪಾದಕ ಹಿರೋಜಿ ಮಾವರಕರ, ಚಿಕ್ಕೋಡಿ ವರದಿಗಾರರಾದ ಸಂಜೀವ ಕಾಂಬಳೆ, ಗಜಾನನ ರಾಮನಕಟ್ಟಿ, ಪತ್ರಿಕಾ ವಿತರಕರಾದ ಶಂಕರ ಸುತಗಟ್ಟಿ ಅವರಿಗೆ ನಾಳೆ ಜಿಲ್ಲಾಡಳಿತ ಪ್ರಶಸ್ತಿ ನೀಡಿ ಪ್ರಧಾನ ಮಾಡಲಿದೆ.
ಶನಿವಾರ ಬೆಳಗ್ಗೆ 9.30 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜರಗುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಕ್ಕೆ ಭಾಜನರಾದ ಮಾಧ್ಯಮ ಪ್ರತಿನಿಧಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗಣ್ಯರುಗಳು ಸನ್ಮಾನಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
