Monday, November 23, 2026
HomeBelagaviವರ್ಗಾವಣೆ ಪತ್ರಕ್ಕಾಗಿ ಮಕ್ಕಳ ಅಹೋರಾತ್ರಿ ಧರಣಿ

ವರ್ಗಾವಣೆ ಪತ್ರಕ್ಕಾಗಿ ಮಕ್ಕಳ ಅಹೋರಾತ್ರಿ ಧರಣಿ

ಬೆಳಗಾವಿ
ಶಾಲಾ ವರ್ಗಾವಣೆ ಪತ್ರಕ್ಕಾಗಿ ವಿದ್ಯಾರ್ಥಿಗಳ ಅಹೋರಾತ್ರಿ ಧರಣಿ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ಬಿಇಓ ಕಚೇರಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಖಾನಾಪುರ ತಾಲೂಕಿನ ಇಟಗಿ ಗ್ರಾಮದ 42 ಖಾಸಗಿ ಒಡೆತನದ ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದ ಮಕ್ಕಳು.ಅಲ್ಲಿಂದ ಸರ್ಕಾರಿ ಶಾಲೆಗೆ ಟಿಸಿ ನೀಡುವಂತೆ ಮಕ್ಕಳ ಮನವಿ ಮಾಡಿದರು. ಸ್ಕಾಲರ್ಶಿಪ್ ಸಲುವಾಗಿ ಪರೀಕ್ಷೆ ಹಿನ್ನೆಲೆ ಟಿಸಿ ನೀಡುವಂತೆ ಮನವಿ ನೀಡದ ಖಾಸಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ವಿಜಯ್ ಕುಮಾರ್ ಸಾನಿಕೊಪ್ಪನಿಂದ ಬಿಇಒ ಕಚೇರಿಗೆ ಮುತ್ತಿಗೆ ಹಾಕಿ ವಿದ್ಯಾರ್ಥಿಗಳು ಧರಣಿ ‌ಕುಳಿತಿದ್ದರು.
22ಜನ ವಿದ್ಯಾರ್ಥಿನಿಯರು ಕೂಡ ಧರಣಿಯಲ್ಲಿ ಭಾಗಿಯಾಗಿದ್ದರು.ಬಿಇಒ ಹೇಳಿದರೂ ಟಿಸಿ ನೀಡದ ಹಿನ್ನೆಲೆ ನಂದಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಹಿದೆ.
ಇಟಗಿ ಗ್ರಾಮದ ಚನ್ನಮ್ಮ ಶಿಕ್ಷಣ ಸಂಸ್ಥೆ ವಿರುದ್ಧ ದೂರು ನೀಡುತ್ತಿರುವ ಪೋಷಕರು. ಟಿಸಿ ನೀಡುವ ವರೆಗೂ ಬಿಇಒ ಕಚೇರಿಯಲ್ಲೇ ಅಹೋರಾತ್ರಿ ಧರಣಿ ನಡೆಸುವುದಾಗಿ ಮಕ್ಕಳಿಂದ ಎಚ್ಚರಿಕೆ ನೀಡಿದ್ದಾರೆ.

Total Views 50
RELATED ARTICLES

Most Popular

Recent Comments

KNN City News
Home
E-Paper