
ಅಥಣಿ
ಅಥಣಿಯ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ನನಗೆ ಹಣದ ಬೇಡಿಕೆ ಇಟ್ಟಿದ್ದು ನಿಜಾ. ಬಹುತೇಕ ಅವರು ಬಿಜೆಪಿಗೆ ಹೋಗುತ್ತಿರಬಹುದು ಎಂದು ಶಾಸಕ ಲಕ್ಷ್ಮಣ ಸವದಿ ಬಾಂಬ್ ಹಾಕಿದ್ದಾರೆ.
ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಸೇರ್ಪಡೆಯಾದಾಗ ಗಜಾನನ ಮನೆಗೆ ಹೋದಾಗ ನಾನು ಪಕ್ಷಕ್ಕಾಗಿ ಇಷ್ಟೊಂದು ಹಣ ಖರ್ಚು ಮಾಡಿದ್ದೇನೆ. ನನಗೆ ಹಣ ಕೊಡಿ ಎಂದು ಬೇಡಿಕೆ ಇಟ್ಟಿದ್ದ. ಅದಕ್ಕೆ ನಾನು ಪಾರ್ಟಿಯಿಂದ ಬಂದ ಹಣ ನೀವೆ ತೆಗೆದುಕೊಳ್ಳಿ ಎಂದಿದ್ದೆ ಎಂದರು.
ಗಜಾನನ ಮಂಗಸೂಳಿಗೆ ನಾನು ನಿಗಮ ಮಂಡಳಿ ಅಧ್ಯಕ್ಷ ಮಾಡುವ ಭರವಸೆ ನೀಡಿಲ್ಲ. ಆತ ಬಿಜೆಪಿಯತ್ತ ಮುಖ ಮಾಡಿರಬಹುದು. ಜಿಲ್ಲಾ ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾನೆ. ಆತ ಬಿಜೆಪಿಗೆ ಸೇರುವ ಮನಸ್ಸು ಇರಬೇಕು. ಆದ್ದರಿಂದ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾನೆ ಎಂದು ಹರಿಹಾಯ್ದರು.
