Monday, November 23, 2026
HomeBelagaviದೂಮ್ ಸಿನಿಮಾ ಮಾದರಿಯಲ್ಲಿ ಮನೆಗಳ್ಳತನ ಮಾಡಿದ್ದ ಆರೋಪಿ ಬಂಧನ: ಎಸ್ಪಿ

ದೂಮ್ ಸಿನಿಮಾ ಮಾದರಿಯಲ್ಲಿ ಮನೆಗಳ್ಳತನ ಮಾಡಿದ್ದ ಆರೋಪಿ ಬಂಧನ: ಎಸ್ಪಿ

ಬೆಳಗಾವಿ
ಜಾನ್ ಅಬ್ರಾಹಿಂ ಖಳನಾಯಕ ಪಾತ್ರದಿಂದ ಪ್ರೇರಪಣೆಗೊಂಡು ದೂಮ್ ಸಿನಿಮಾ ಮಾದರಿಯಲ್ಲಿ ದೀಪಾವಳಿಯ ಹಬ್ಬದಂದು ಮನೆಯ ಮಾಲೀಕರು ಬೆಂಗಳೂರಿಗೆ ಹೋದಾಗ ಮನೆಯ ಬಾಗಿಲು‌ ಮುರಿದು ಬೆಲೆ ಬಾಳುವ 1,280 ಗ್ರಾಂ, 8ವರೆ ಕೆ.ಜೆ ಬೆಳ್ಳಿ ಆಭರಣ ಕಳ್ಳತನ ಮಾಡಿದ್ದ ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಹೇಳಿದರು.
ಗುರುವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಯಮಕನಮರಡಿ ‌ಗ್ರಾಮದ ವಿಶ್ವನಾಥ ದುಗ್ಗಾಣಿ ಮನೆ ಕಳ್ಳತನ ಮಾಡಿದ್ದ ಮಹಾಂತೇಶ ‌ನಗರದ ಸುರೇಶ್ ನಾಯಿಕ (37) ವರ್ಷದ ಆರೋಪಿಯನ್ನು ಬಂಧಿಸಲಾಗಿದೆ. ಮನೆಯ ಮಾಲೀಕರು ಬೆಂಗಳೂರಿಗೆ ತೆರಳಿದ್ದ ಮಾಹಿತಿಯನ್ನು ಖಚಿತ ಪಡಿಸಿಕೊಂಡಿದ್ದ ಮನೆಗಳ್ಳ ಸುರೇಶ್ ಮನೆಯ ಬಾಗಿಲು ಮುರಿದು ಟ್ರೇಜರಿಯ ಬಾಗಿಲು‌ ಮುರಿದು 89 ಲಕ್ಷಕ್ಕೂ ಮೌಲ್ಯದ ಚಿನ್ನ ಹಾಗೂ 8.5 ಕೆ.ಜಿ. ಬೆಳ್ಳಿಯ 1 ಲಕ್ಷ 25 ಸಾವಿರ ಮೌಲ್ಯದ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಬಂಧಿತ ಆರೋಪಿಯಿಂದ ಒಟ್ಟು 1280 ಗ್ರಾ ಬಂಗಾರ, 8 ವರೆಗೆ ಕೆ.ಜಿ ಬೆಳ್ಳಿ ಆಭರಣ, ಒಂದು ಥಾರ್ ಕಾರ್, 2 ಬೈಕ್ ವಶಪಡಿಸಿಕೊಂಡಿರುವ ಯಮಕನಮರಡಿ ‌ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ‌ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ, ಯಮಕನಮರಡಿ ‌ಸಿಪಿಐ ಜಾವೇದ್ ಮುಷಾಪುರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Total Views 162
RELATED ARTICLES

Most Popular

Recent Comments

KNN City News
Home
E-Paper