Monday, November 23, 2026
HomeBelagaviಸಚಿವ ಸ್ಥಾನ ಬೇಡ ಅನ್ನೋಕೆ ನಾನು ಸನ್ಯಾಸಿ ಅಲ್ಲ: ಸವದಿ

ಸಚಿವ ಸ್ಥಾನ ಬೇಡ ಅನ್ನೋಕೆ ನಾನು ಸನ್ಯಾಸಿ ಅಲ್ಲ: ಸವದಿ

ಚಿಕ್ಕೋಡಿ
ಸಚಿವ ಸ್ಥಾನ ಬೇಡ ಅನ್ನೊದಕ್ಕೆ ನಾನೇನು ಸನ್ಯಾಸಿನಲ್ಲ‌. ನಾನು ಸಚಿವ ಸ್ಥಾನದ ಬಗ್ಗೆ ಅಪೇಕ್ಷೆ ಪಟ್ಟಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ನೀಡುವುದು ವರಿಷ್ಠರಿಗೆ ಬಿಟ್ಟ ವಿಷಯ. ಬೇಡ ಅನ್ನುವುದಕ್ಕೆ ನಾನೇನು ಸನ್ಯಾಸಿ ಅಲ್ಲ ನಾನು ರಾಜಕಾರಣಿ. ಸಚಿವ ಸಂಪುಟ ವಿಸ್ತರಣೆ ಮಾಡುವುದು ಹೈ ಕಮಾಂಡ್ ಮತ್ತು ಮುಖ್ಯಮಂತ್ರಿ ಕೂಡಿ ಚರ್ಚೆ ಮಾಡಿದಾಗ ಅದು ತೀರ್ಮಾನ ಆಗುತ್ತದೆ. ಚಳಿಗಾಲದ ಅಧಿವೇಶನ ಮುಗಿದ ನಂತರ ಆಗಬಹುದು ಎಂದರು.
ನೂತನ ಸಚಿವ ಸಂಪುಟ ರಚನೆ ಬಗ್ಗೆ ಸದ್ಯಕ್ಕೆ ಯಾವುದೇ ಚಟುವಟಿಕೆಗಳು ನಡೆಯಲ್ಲ ಅಂತ ನನ್ನ ಅಭಿಪ್ರಾಯ. ಅಧಿವೇಶನದ ಬಳಿಕ ನೂತನ ಸಚಿವ ಸಂಪುಟ ರಚನೆ ಆಗಬಹುದು ಎಂದರು.

Total Views 72
RELATED ARTICLES

Most Popular

Recent Comments

KNN City News
Home
E-Paper