Monday, November 23, 2026
HomeBelagaviಕೇದಾರ ಶಾಖಾ ಮಠದ ಮುತ್ನಾಳ ಗ್ರಾಮದ ಶ್ರೀಗಳ ಲಿಂಗೈಕ್ಯ

ಕೇದಾರ ಶಾಖಾ ಮಠದ ಮುತ್ನಾಳ ಗ್ರಾಮದ ಶ್ರೀಗಳ ಲಿಂಗೈಕ್ಯ

ಬೆಳಗಾವಿ
ಮುತ್ನಾಳ ಗ್ರಾಮದ ಕೇದಾರ ಪೀಠದ ಶಾಖಾ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದಾರೆ. ಅವರ ಅಗಲಿಕೆಯಿಂದ ಅವರ ಭಕ್ತ ಸಮೂಹ ಶೋಕ ಸಾಗರದಲ್ಲಿ ಮುಳುಗಿದೆ.
ಶಿವಾನಂದ ಸ್ವಾಮೀಜಿ ಬಹಳಷ್ಟು ಸರಳ ವ್ಯಕ್ತಿ, ಹಾಗೆ ಇತ್ತಿಚೇಗೆ ಶ್ರೀಗಳನ್ನು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಜಿಲ್ಲಾ ಘಟಕದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಶ್ರೀಗಳು ಎಲ್ಲರೊಂದಿಗೆ ಬೆರೆಯುವ ಅಪರೂಪದ ವ್ಯಕ್ತಿ. ಅವರ ಅಗುಲುವಿಕೆಯಿಂದ ಇಡೀ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಬೆಳಗಾವಿ ತಾಲೂಕಿನ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಶೋಕ ವ್ಯಕ್ತಪಡಿಸಿದ್ದಾರೆ.

Total Views 251
RELATED ARTICLES

Most Popular

Recent Comments

KNN City News
Home
E-Paper