Monday, November 23, 2026
HomeBelagaviಜೈ ಕಿಸಾನ್ ಖಾಸಗಿ ಮಾರುಕಟ್ಟೆಗೆ ಶಾಕ್ ನೀಡಿದ ಕೆಎಟಿ

ಜೈ ಕಿಸಾನ್ ಖಾಸಗಿ ಮಾರುಕಟ್ಟೆಗೆ ಶಾಕ್ ನೀಡಿದ ಕೆಎಟಿ

ಬೆಳಗಾವಿ
ಬೆಳಗಾವಿ ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಖಾಸಗಿ ಜೈ ಕಿಸಾನ್ ತರಕಾರಿ ಮಾರುಕಟ್ಟೆಯ ವ್ಯಾಪಾರ ಪರವಾನಗಿ ರದ್ದತಿ ಸಂಬಂಧಿಸಿದಂತೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ರಿಟ್ ಅರ್ಜಿ ಹಾಗೂ ರಿಟ್ ಅಪೀಲನ್ನು ಈಗಾಗಲೇ ತಿರಸ್ಕರಿಸಿದ ನಂತರ, ಕರ್ನಾಟಕ ಅಪೀಲಾಟ ನ್ಯಾಯಮಂಡಳಿ (KAT), ಬೆಂಗಳೂರು ಮುಂದೆ ವಿಚಾರಣೆಗೆ ಬಂದಿತು.
ರೈತರು ಹಾಗೂ ರೈತ ಸಂಘಟನೆಗಳ ಪರವಾಗಿ ವಕೀಲ ನಿತಿನ್ ಬೋಳಬಂಡಿ ಅವರು ವಾದ ಮಂಡಿಸಿ, ಬೆಳಗಾವಿ ಎಪಿಎಂಸಿ (APMC)ಯಲ್ಲಿ ಸಾಕಷ್ಟು ಖಾಲಿ ಅಂಗಡಿಗಳು ಲಭ್ಯವಿದ್ದರೂ, ಜೈ ಕಿಸಾನ್ ವ್ಯಾಪಾರಿಗಳು ಉದ್ದೇಶಪೂರ್ವಕವಾಗಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸದೇ, ಖಾಸಗಿ ಮಾರುಕಟ್ಟೆಯ ಏಕಾಧಿಪತ್ಯವನ್ನು ಮುಂದುವರಿಸಲು ಯತ್ನಿಸುತ್ತಿದ್ದಾರೆ ಎಂದು ನ್ಯಾಯಮಂಡಳಿಗೆ ತಿಳಿಸಿದೆ. ಈ ನಡೆ ರೈತರ ಹಿತಾಸಕ್ತಿಗೆ ಗಂಭೀರ ಹಾನಿ ಉಂಟುಮಾಡುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ವಿಚಾರಣೆ ಬಳಿಕ, ಕರ್ನಾಟಕ ಅಪೀಲಾಟ ನ್ಯಾಯಮಂಡಳಿಯು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸಲು ನಿರ್ದೇಶನ ನೀಡಿದೆ. ಅದೇ ಸಮಯದಲ್ಲಿ, ಮೇಲ್ಮನವಿ ಸಲ್ಲಿಸಿದ್ದ ಜೈ ಕಿಸಾನ್ ಸಂಸ್ಥೆಗೆ ಯಾವುದೇ ಮಧ್ಯಂತರ ತಡೆಯಾಜ್ಞೆ ನೀಡಲು ನ್ಯಾಯಮಂಡಳಿ ನಿರಾಕರಿಸಿದೆ. ಪರಿಣಾಮವಾಗಿ, ವ್ಯಾಪಾರ ಪರವಾನಗಿ ರದ್ದತಿ ಆದೇಶ ಮುಂದುವರಿದು ಜಾರಿಯಲ್ಲೇ ಇರುತ್ತದೆ.

ಇದು ಜೈ ಕಿಸಾನ್ ಗುಂಪಿಗೆ ಮತ್ತೊಂದು ಮಹತ್ವದ ಕಾನೂನು ಹಿನ್ನಡೆಯಾಗಿದ್ದು, ರೈತರ ಹಿತ ಮತ್ತು ಸಾರ್ವಜನಿಕ ಮಾರುಕಟ್ಟೆ ವ್ಯವಸ್ಥೆಯ ರಕ್ಷಣೆಯತ್ತ ನ್ಯಾಯಾಲಯಗಳ ನಿಲುವನ್ನು ಮತ್ತೊಮ್ಮೆ ದೃಢಪಡಿಸಿದೆ.

Total Views 65
RELATED ARTICLES

Most Popular

Recent Comments

KNN City News
Home
E-Paper